ಜನರು ಬದಲಾವಣೆ ಬಯಸುತ್ತಿದ್ದಾರೆ : ಗುಲಾಂ ನಬಿ ಆಜಾದ್‍

ಫರೀದಾಬಾದ್‌

         ಪರಿವರ್ತನ್ ಯಾತ್ರಾ ಇಡೀ ರಾಜ್ಯದಲ್ಲಿ ಸಂಚರಿಸಿದ ಬಳಿಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಜಯಗಳಿಸಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಹರ್ಯಾಣದಲ್ಲಿ ಪಕ್ಷದ ಉಸ್ತುವಾರಿ ಗುಲಾಂ ನಬಿ ಆಜಾದ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

        ಈ ವರ್ಷದ ಮಧ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಮರಳಲಿದೆ ಎಂದು ಅವರು ಹೇಳಿದರು.

         ಪರಿವರ್ತನ್‌ ಯಾತ್ರೆಯ ಸಮಾರೋಪದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತಿಯೊಬ್ಬ ಮತದಾರರಿಗೂ ಒಗ್ಗಟ್ಟಿನ ಸಂದೇಶವನ್ನು ನಾವು ತಲುಪಿಸಿದ್ದೇವೆ ಎಂದರು.

        ಕೊನೆಯ ದಿನದ ಸಮಾರೋಪದಲ್ಲಿ ಫರೀದಾಬಾದ್‌ ಮತ್ತು ಪಲ್ವಾಲ್‌ ಜಿಲ್ಲೆಗಳ ಮೂಲಕ ಗುಲಾಂ ನಬಿ ಆಜಾರ್ ಯಾತ್ರೆಯಲ್ಲಿ ಸಂಚರಿಸಿದರು. ಸೂರಜ್‌ ಕುಂದ್‌, ಅಂಖಿರ್ ಚೌಕ್‌, ನೀಲಮ್‌ ಚೌಕ್‌, ರಾಜೀವ್‌ ಗಾಂಧಿ ಚೌಕ್‌, ಅನಜ್ ಮಂಡಿ ತಿಗಾನ್‌, ಬಲ್ಲಭ್‌ಗರ್, ಜೆಸಿಬಿ ಚೌಕ್ ಮುಂತಾದ ಕಡೆಗಳಲ್ಲಿ ಪರಿವರ್ತನ್ ಯಾತ್ರೆ ಸಂಚರಿಸಿತು.ಜನರು ಯಾತ್ರೆಗೆ ಹೂವುಗಳನ್ನು ಎಸೆಯುವ ಮೂಲಕ, ಡ್ರಮ್‌ ಬಾರಿಸುವ ಮೂಲಕ ಸ್ವಾಗತ ಕೋರಿದರು.

        ರೈತರು, ಯುವಕರು, ಮಹಿಳೆಯರು, ಸರ್ಕಾರಿ ಉದ್ಯೋಗಗಳು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳ ಜನರು, ಸರ್ಕಾರದ ದುರಾಡಳಿತದ ವಿರುದ್ಧ ಪ್ರತೀಕಾರ ತೀರಿಸಲು ಕಾಯುತ್ತಿದ್ದಾರೆ. ಮತದಾನ ಮೂಲಕ ಅವರು ಪ್ರತೀಕಾರ ತೀರಿಸಿಕೊಳ್ಳಲಿದ್ದಾರೆ ಎಂದು ಆಜಾದ್‍ ಹೇಳಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link