ನವದೆಹಲಿ:
ದೇಶದ ಯಾವುದೇ ಇಲಾಖೆಯ ಮಾಹಿತಿ ಪಡೆಕೊಳ್ಳುವ ಅಧಿಕಾರವನ್ನು ಸಾಮಾನ್ಯರಿಗೆ ಕೊಟ್ಟಂತ ಕಾನೂನು ಆರ್ ಟಿ ಐ ಈ ಕಾನುನು ಅನ್ವಯ ಯಾರಾದರು ಯಾವ ಇಲಾಖೆಯಾದರು ಸರಿ ತಾವು ಸಿಮಿತ ಪರಿಧಿಯೊಳಗೆ ಮಾಹಿತಿ ಕೇಳಿದರೆ ಇಲ್ಲ ಎನ್ನುವಂತಿಲ್ಲ ಇದೇ ಅಧಿಕಾರ ಬಳಸಿಕೊಂಡು ಸಾರ್ವಜನಿಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರ ಕೇಳಿ ಇಡೀ ದೇಶ ಬೆಚ್ಚಿ ಬಿದಿದ್ದೆ .
ಕೇಂದ್ರ ಸರ್ಕಾರದ ಸಚಿವರುಗಳ ವಿದೇಶ ಪ್ರವಾಸಕ್ಕಾಗಿ ಇಲ್ಲಿಯವರೆಗೂ ಸರಿ ಸುಮಾರು 239.05 ಕೋಟಿ ರೂ ವ್ಯಯಿಸಿದ್ದಾರೆ ಎಂಬ ಸ್ಪೋಟಕ ಮಾಹಿತಿಯೊಂದು ತಿಳಿದುಬಂದಿದೆ.
ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ವರೆಗೂ ಪ್ರಧಾನಿ ಮೋದಿ ಅವರನ್ನು ಹೊರತು ಪಡಿಸಿ ಎನ್ ಡಿಎ ಸಚಿವರ ದೇಶ ಪ್ರವಾಸಕ್ಕೆ ಸುಮಾರು 239.05 ಕೋಟಿ ರೂಗಳನ್ನು ವ್ಯಯಿಸಲಾಗಿದೆ ಎಂದು ತಿಳಿದುಬಂದಿದೆ.
ಹಾಕಿದ ಅರ್ಜಿಗೆ ಕೇಂದ್ರ ಸರ್ಕಾರ ಉತ್ತರಿಸಿದ್ದು , ಪಾವತಿ ಮತ್ತು ಖಾತೆಗಳು, ಕ್ಯಾಬಿನೆಟ್ ವ್ಯವಹಾರಗಳ ಕಾರ್ಯಾಲಯ ಈ ಅರ್ಜಿಗೆ ಉತ್ತರ ನೀಡಿದೆ. ಕಾರ್ಯಾಲಯ ನೀಡಿರುವ ಉತ್ತರದ ಅನ್ವಯ ಏಪ್ರಿಲ್ 1, 2014 ರಿಂದ ಮಾರ್ಚ್ 31 2018ರವರೆಗೂ 25 ಕೇಂದ್ರ ಸಚಿವರು, 45 ರಾಜ್ಯಖಾತೆ ಸಚಿವರು ಮತ್ತು 11 ಮಂದಿ ಸ್ವತಂತ್ರ ಖಾತೆ ಸಚಿವರ ವಿದೇಶ ಪ್ರವಾಸಕ್ಕೆ 239.05 ಕೋಟಿ ರೂಗಳು ಖರ್ಚಾಗಿದೆ ಎಂಬ ಸವಿವರವಾದ ವರದಿಯನ್ನು ಅರ್ಜಿದಾರನಿಗೆ ನೀಡಿದೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ