ಕೋಲ್ಕತ್ತಾ
ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ ಗೆ ಡಾರ್ಜಲಿಂಗ್ ಜಿಲ್ಲಾಡಳಿತ ಅನುಮತಿಯನ್ನು ನಿರಾಕರಿಸಿರುವುದು ಕಾಂಗ್ರೆಸ್ ನಾಯಕರಲ್ಲಿ ಆಕ್ರೋಶ ಹುಟ್ಟಿಸಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರದ್ದು ಕೀಳುಮಟ್ಟದ ತಂತ್ರ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದ್ದು, ಈ ಕ್ರಮ ಅಸಾಂವಿಧಾನಿಕ ಎಂದು ದೂರಿದೆ.
ಏಪ್ರಿಲ್ 14 ರಂದು ರಾಹುಲ್ ಗಾಂಧಿ ಅವರು ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಪ್ರಚಾರ ಸಭೆ ನಡೆಸಬೇಕಿತ್ತು. ಸಿಲಿಗುರಿಯಲ್ಲಿ ಇಳಿಯಬೇಕಿದ್ದ ಹೆಲಿಕಾಪ್ಟರ್ ಗೆ ಡಾರ್ಜಲಿಂಗ್ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ.
ತಮ್ಮ ವಿರೋಧಿಗಳಿಗೆ ಪ್ರಚಾರಕ್ಕೂ ಅವಕಾಶ ನೀಡದಿರುವುದು ಮಮತಾ ಬ್ಯಾನರ್ಜಿ ಅವರ ಸರ್ವಾಧಿಕಾರಿ ನಡೆಗೆ ಸಾಕ್ಷಿ” ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ರಾಹುಲ್ ಅವರ ಹೆಲಿಕಾಪ್ಟರ್ ಅನ್ನು ತಡೆಹಿಡಿದ ಟಿಎಂಸಿ ನಡೆಯಿಂದಾಗಿ ಕಾಂಗ್ರೆಸ್-ಟಿಎಂಸಿ ನಡುವೆ ಭಿನ್ನಾಭಿಪ್ರಾಯ ಆರಂಭವಾಗಿದ್ದು, ಇದು ಮಹಾಘಟಬಂಧನದ ಮೇಲೆ ಭಾರೀ ಪರಿಣಾಮ ಬೀರಿದರೆ ಅಚ್ಚರಿಯಿಲ್ಲ.
