ದಾಖಲೆಯ ಏರಿಕೆ ಕಂಡ ಪೆಟ್ರೋಲ್ ಆಮದು..!

ಮುಂಬೈ:

   ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರು ಮುಖವಾಗಿರುವ ಸಂದರ್ಭದಲ್ಲಿ ಭಾರತ ಕಚ್ಚಾ ತೈಲ ಆಮದು ಜುಲೈನಲ್ಲಿ ಇಳಿಕೆ ಮಾಡಿದೆ. ಆದರೆ ಪೆಟ್ರೋಲ್ ಆಮದು 2011ರಿಂದ ಗಮನಿಸಿದರೆ ಈ ಏಪ್ರಿಲ್‌ನಿಂದ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ ಎಂದು ತೈಲ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣೆ ಕೋಶ (ಪಿಪಿಎಸಿ)  ಮಾಹಿತಿ ನೀಡಿದೆ.

    ವಿಶ್ವದ ಮೂರನೇ ಅತಿದೊಡ್ಡ  ಕಚ್ಚಾ ತೈಲ  ಆಮದು ಮಾಡಿಕೊಳ್ಳುವ ದೇಶವಾದ ಭಾರತ ಹಿಂದಿನ ವರ್ಷಕ್ಕಿಂತ ಶೇಕಡಾ 1.2 ರಷ್ಟು ಇಳಿದು 19.34 ದಶಲಕ್ಷ ಟನ್‌ಗಳಿಗೆ ಇಳಿಕೆಯಾಗಿದೆ, ಆದರೆ ಕಳೆದ ತಿಂಗಳು ಪೆಟ್ರೋಲ್ ಆಮದು  ಶೇ 14.6 ರಷ್ಟು ಹೆಚ್ಚಾಗಿದೆ . ಜುಲೈನಲ್ಲಿ ಪೆಟ್ರೋಲ್ ಆಮದು 230,000 ಟನ್ಗಳಿಗೆ ಏರಿಕೆಯಾಗಿದೆ. 

    ಈ ತಿಂಗಳ ಆರಂಭದಲ್ಲಿ ಪ್ರಕಟವಾದ ಸರ್ಕಾರದ ಅಂಕಿಅಂಶಗಳ ಪೈಕಿ ಪೆಟ್ರೋಲ್ ಮಾರಾಟವು ಕಳೆದೊಂದು ವರ್ಷದ ಆಮದು  ಪ್ರಮಾಣಕ್ಕಿಂತ ಶೇ.8.8ರಷ್ಟು ಹೆಚ್ಚಾಗಿದೆ ಮತ್ತು 2.52 ಮಿಲಿಯನ್ ಟನ್ ಆಗಿದೆ ಎಂದು ಮಾಹಿತಿಯಲ್ಲಿ ತಿಳಿಸಿದೆ.ಏತನ್ಮಧ್ಯೆ, ಎಲ್ಎನ್ಜಿ ಆಮದು ಫೆಬ್ರವರಿ 2018 ರಿಂದ 850,000 ಟನ್ ಗಳಿಗೆ ಕಡಿಮೆಯಾಗಿದೆ.

    ಕಲ್ಲಿದ್ದಲು ಮತ್ತು ದ್ರವೀಕೃತ ನೈಸರ್ಗಿಕ ಅನಿಲ ಎರಡರ ಮೇಲು ತೆರಿಗೆ ಯಾವುದೇ ಪರಿಣಾಮ ಬೀರದೇ ಇದ್ದರೂ ಭಾರತ ಕೆಲ ತಿಂಗಳುಗಳಿಂದ ಕಚ್ಚಾ ತೈಲ ಆಮದನ್ನು ಸ್ಥಗಿತಗೊಳಿಸಿದೆ. ಮೇ ಆರಂಭದಿಮದ ಇರಾನಿನ ಕಚ್ಚಾ ಖರೀದಿದಾರರಿಗೆ ಅಮೇರಿಕ ನೀಡುತ್ತಿದ್ದ ಸಬ್ಸಿಡಿಯನ್ನು ಹಿಂತೆಗೆದ ನಂತರ ಭಾರತೀಯ ರಿಫೈನರಿಗಳು ಇರಾನ್‌ ಸರಕುಗಳ ಸಾಗಾಣಿಕೆ ವೆಚ್ಚಗಳನ್ನು ಭರಿಸಲು ಆಗದೆ ದರ ಹೆಚ್ಚಳದತ್ತ ಮುಖ ಮಾಡಿವೆ ಎಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap