ಮುಂಬೈ: 
ದೇಶದಲ್ಲಿ ಕಳೆದ ಕೆಲದಿನಗಳಿಂದ ಇಳಿಯುತ್ತಿರುವ ಪೆಟ್ರೋಲ್ -ಡೀಸೆಲ್ ದರವು ಮತ್ತೂ ಇಳಿಕೆ ಕಂಡಿದೆ. 2020ರ ಆರಂಭದಿಂದಲೂ ಪೆಟ್ರೋಲ್, ಡೀಸೆಲ್ ಬೆಲೆಯು ಕಡಿಮೆಯಾಗುತ್ತಲೇ ಸಾಗಿದ್ದು ಒಟ್ಟಾರೆ ಪ್ರತಿ ಲೀಟರ್‌ಗೆ ಮೂರು ರುಪಾಯಿ ಕಡಿಮೆಯಾಗಿದೆ. ಸೋಮವಾರ ಪೆಟ್ರೋಲ್ ಲೀಟರ್‌ಗೆ 13 ಪೈಸೆ, ಡೀಸೆಲ್ ದರವು ಲೀಟರ್‌ಗೆ 16 ಪೈಸೆ ಕಡಿಮೆಯಾಗಿದೆ.
ಕಚ್ಛಾ ತೈಲ ದರವು ವರ್ಷದ ಆರಂಭದಲ್ಲಿ ಬ್ಯಾರೆಲ್‌ಗೆ 75 ಡಾಲರ್‌ನಷ್ಟಿತ್ತು. ಆದರೆ ಇದೀಗ 54 ಅಮೆರಿಕನ್ ಡಾಲರ್‌ಗೆ ಇಳಿಕೆಯಾಗಿರುವುದರಿಂದ ಪೆಟ್ರೋಲ್ -ಡೀಸೆಲ್ ಬೆಲೆ ಇಳಿಕೆಯತ್ತ ಮುಖಮಾಡಿದೆ. ಹೀಗಾಗಿ ಸರ್ಕಾರಿ ಇಂಧನ ಚಿಲ್ಲರೆ ವ್ಯಾಪಾರಿಗಳು ಕಳೆದ ಹಲವು ದಿನ ತೈಲ ಬೆಲೆಯನ್ನು ಕಡಿತಗೊಳಿಸುತ್ತಾ ಬಂದಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








