ನವದೆಹಲಿ:
ಪೆಟ್ರೋಲಿಯಂ ಕಂಪನಿಗಳು ಸತತ 18ನೇ ದಿನವೂ ತೈಲ ಬೆಲೆ ಏರಿಕೆ ಮಾಡಿದ್ದು, ಪೆಟ್ರೋಲ್ ಬೆಲೆ 35 ಪೈಸೆ ಹಾಗೂ ಡೀಸೆಲ್ ಬೆಲೆ 60 ಪೈಸೆ ಭಾನುವಾಹ ಹೆಚ್ಚಳವಾಗಿದೆ. ಇದರಿಂದ ದೆಹಲಿಯಲ್ಲಿ ಪೆಟ್ರೋಲ್ ಲೀಟರ್’ಗೆ 78.88 ಹಾಗೂ ಡೀಸೆಲ್ ಲೀಟರ್’ಗೆ 77.67ಕ್ಕೆ ಏರಿಕೆಯಾಗಿದೆ. ಇನ್ನು ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್’ನ ದರ ರೂ.81.81 ಇದ್ದರೆ, ಡೀಸೆಲ್ ದರ ರೂ. 74.43ಕ್ಕೆ ತಲುಪಿದೆ ಎಂದು ವರದಿಗಳು ತಿಳಿಸಿವೆ.ಇದರೊಂದಿಗೆ ಒಟ್ಟಾರೆ 15 ದಿನಗಳ ಅಂತರದಲ್ಲಿ ಪೆಟ್ರೋಲ್ ದರ ರೂ.8.88 ಹಾಗೂ ಡೀಸೆಲ್ ದರ ರೂ.7.97 ಏರಿಕೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








