ಕೋಲ್ಕತ್ತಾ:
ಪ್ರಧಾನಿಯವರು ಭಾನುವಾರದ ದಿನ ರಾತ್ರಿ ಮೇಣದ ಬತ್ತಿಗಳನ್ನು ಹತ್ತಿಸುವ ಮೂಲಕ ಕೊರೋನಾ ವಿರುದ್ಧ ದೇಶದ ಒಗ್ಗಟ್ಟನ್ನು ಪ್ರದರ್ಶಿಸಿ ಎಂದು ಕರೆ ಕೊಟ್ಟ ಬೆನ್ನಲ್ಲೇ . ಇದರ ಕುರಿತು ಪ್ರತಿಕ್ರಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ “ನಾನಿದನ್ನು ರಾಜಕೀಯಗೊಳಿಸುವುದಿಲ್ಲ, ನನ್ನ ವೈಯುಕ್ತಿಕ ಇಚ್ಚೆಯಂತಿರುತ್ತೇನೆ. ಇಷ್ಟವಾದರೆ ಆ ಸಮಯದಲ್ಲಿ ನಿದ್ರಿಸುತ್ತೇನೆ” ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿಯವರ ಸಂದೇಶವನ್ನು ಪಾಲಿಸುವವರು ಅವರ ಸೂಚನೆಗಳನ್ನು ಅನುಸರಿಸಬಹುದು , “ಪ್ರಧಾನಿ ತಮ್ಮ ಮನಸ್ಸಿನಲ್ಲಿರುವುದನ್ನು ಹೇಳೀದ್ದಾರೆ. ನಾನು ನನ್ನ ಮಾತನ್ನು ಹೇಳುತ್ತೇನೆ. ನಾನು ಬೇರೊಬ್ಬರ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ…. ಪ್ರಧಾನಿ ಏನಾದರೂ ಒಳ್ಳೆಯದನ್ನು ಹೇಳಿದ್ದಾರೆ ಎಂದು ನೀವು ಭಾವಿಸಿದರೆ, ಅದನ್ನು ಅನುಸರಿಸಿ… ಇದು ವೈಯಕ್ತಿಕ ನಿರ್ಧಾರ, ”ಮಮತಾ ಹೇಳಿದರು.
