ಅಟಲ್ ಜಲ ಯೋಜನೆಗೆ ಚಾಲನೆ ನೀಡಿದ ಪ್ರಧಾನ ಮಂತ್ರಿ.!

ನವದೆಹಲಿ:

    ನಮ್ಮ ರಾಜ್ಯ ಸೇರಿದಂತೆ ಇನ್ನು ಅನೇಕ ರಾಜ್ಯಗಳಿಗೆ ಅನುಕೂಲವಾಗುವ ಮತ್ತು  ಅಂತರ್ ಜಲ ವೃದ್ಧಿಗಾಗಿ ಮಾಡಿರುವ ಯೋಜನೆ ಅಟಲ್ ಜಲ ಯೋಜೆನೆಯಿಂದ ನೂರಾರು  ರೈತರ ಆದಾಯ ಹೆಚ್ಚಿಸುವ ಮಹತ್ವದ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ 

     ಆರು ರಾಜ್ಯಗಳಾದ ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ರಾಜಸ್ತಾನ, ಮಧ್ಯ ಪ್ರದೇಶ, ಹರ್ಯಾಣ ಮತ್ತು ಉತ್ತರ ಪ್ರದೇಶಗಳಲ್ಲಿ ಸಮುದಾಯಗಳ ಭಾಗವಹಿಸುವಿಕೆಯ ಮೂಲಕ ಅಂತರ್ಜಲ ನಿರ್ವಹಣೆ ಸುಧಾರಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಈ ಯೋಜನೆ ಜಾರಿಗೆ ಬಂದರೆ 78 ಜಿಲ್ಲೆಗಳ 8 ಸಾವಿರದ 350 ಗ್ರಾಮ ಪಂಚಾಯತ್ ಗಳಿಗೆ ಇದರಿಂದ ಪ್ರಯೋಜನವಾಗಲಿದೆ. 

    ವಿಜ್ಞಾನ ಭವನದಲ್ಲಿ  ಜರುಗಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 95 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಈಯೋಜನೆಗೆ ಚಾಲನೆ ನೀಡಿ, ಇದು ರಾಷ್ಟ್ರಕ್ಕೆ ಬಹಳ ಮುಖ್ಯವಾದ ಯೋಜನೆಯಾಗಿದ್ದು, ಅಟಲ್ ಜಿ ಗೆ ಸಮರ್ಪಿಸಲಾಗಿದೆ ಎಂದರು. 

 
     ಅಂತರ್ಜಲ ಸಂಪನ್ಮೂಲ ಕಡಿಮೆಯಾಗುವ ಸಮಸ್ಯೆ ಕೌಟುಂಬಿಕ ಸಮಸ್ಯೆ ಅಥವಾ ವ್ಯಕ್ತಿಯ ಸಮಸ್ಯೆಯಾಗಿ ನೋಡುವುದು,   ಚಿಂತಿಸುವುದಷ್ಟೇ ಅಲ್ಲ, ಇದು ಒಟ್ಟಾರೆ ದೇಶದ ಅಭಿವೃದ್ಧಿಯ ಮೇಲೂ ಪರಿಣಾಮ ಬೀರಲಿದೆ  ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.ಈ ಮೊದಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಭಿನ್ನಾಭಿಪ್ರಾಯಗಳು ಇರುವುದರಿಂದ ನೀರಿನ ಸಂರಕ್ಷಣೆಯ  ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ . 

      ಈ ಯೋಜನೆಯು ಅಂತರ್ಜಲ ಸಂಪನ್ಮೂಲ ಈಗಾಗಲೇ ಕಡಿಮೆ ಇರುವ ನಿರ್ದಿಷ್ಟ ಪ್ರದೇಶಗಳು ಅಥವಾ ಪ್ರದೇಶಗಳಿಗೆ ಪ್ರದೇಶಗಳಿಗೆ ಹೆಚ್ಚಿನ ಒತ್ತು ನೀಡಲಿದೆ.ನೀರಿನ ವಿಷಯವು ಬಹಳ ಮುಖ್ಯವಾಗಿತ್ತು ಮತ್ತು ಅಟಲ್ ಜಿ ಅವರ ಹೃದಯಕ್ಕೆ ಹತ್ತಿರವೂ ಅಗಿತ್ತು  ಎಂದು ಪ್ರಧಾನಿ ಹೇಳಿದರು. 2024 ರ ವೇಳೆಗೆ ದೇಶದ ಪ್ರತಿಯೊಂದು ಮನೆಗೂ ನೀರು ಒದಗಿಸುವ ಉದ್ದೇಶದಿಂದ ಈ ಯೋಜನೆ ಒಂದು ಹೆಜ್ಜೆ, ಭಾಗವಾಗಿದೆ .ಜಲ್ ಜೀವನ್ ಮಿಷನ್ ಪ್ರತಿ ಮನೆಗಳಿಗೆ ಕೊಳವೆಗಳ ಮೂಲಕ ನೀರು ಪೂರೈಕೆ ಮಾಡಲು ಸಹಕಾರ ನೀಡಲಿದೆ. ಆದರೆ ಅಟಲ್ ಭುಜಲ್ ಯೋಜನೆ ಅಂತರ್ಜಲ ತುಂಬಾ ಕಡಿಮೆ ಇರುವ ಪ್ರದೇಶಗಳ ಬಗ್ಗೆ ವಿಶೇಷ ಗಮನ ಹರಿಸಲಿದೆ ಎಂದು ಅವರು ಹೇಳಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap