ನವದೆಹಲಿ:
ಆರಕ್ಷಕರಂತೆ ವೇಷ ಮರಿಸಿಕೊಂಡು ಬಂದ ಇಬ್ಬರು ಕಾಮುಕರು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ರಾಜಧಾನಿಯಲ್ಲಿ ನಡೆದಿದೆ.
ಈ ಘಟನೆಯು ಭಾನುವಾರ ರಾತ್ರಿ ದೆಹಲಿಯ ಕನ್ಜಾವಾಲ ಭಾಗದಲ್ಲಿ ನಡೆದಿದೆ ಎನ್ನಲಾಗಿದೆ. ಪೊಲೀಸರಂತೆ ವೇಷ ಧರಿಸಿ ಬಂದ ಕಾಮುಕರು ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೇ ಆಕೆಯ ಸಂಬಂಧಿ ಅಪ್ರಾಪ್ತೆಗೂ ಕಿರುಕುಳ ನೀಡಿದ್ದಾರೆ.ಸದ್ಯಕ್ಕೆ ಯುವತಿ ಹಾಗೂ ಸಂಬಂಧಿ ಕನ್ಜಾವಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರಂತೆ ಪೋಸ್ ಕೊಟ್ಟು ಅವರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
