ತಬ್ಲಿಘಿ ಮುಸ್ಲಿಮರ ವಿರುದ್ಧ ವಿವಾದಾತ್ಮಕ ಹೇಳಿಕೆ :ಜಿಎಸ್ ವಿಎಂ ಪ್ರಾಂಶುಪಾಲರ

ಕಾನ್ಪುರ:

      ವಿವಾದಾತ್ಮಕ ಹೇಳಿಕೆ ನೀಡಿದ್ದಾರೆಂದು ಕಾನ್ಪುರದ ಗಣೇಶ್ ಶಂಕರ್ ವಿದ್ಯಾರ್ಥಿ ವೈದ್ಯಕೀಯ ಕಾಲೇಜಿ (ಜಿಎಸ್ ವಿಎಂ) ನ ಪ್ರಾಂಶುಪಾಲರನ್ನು ಸರ್ಕಾರ ವಜಾಗೊಳಿಸಿದೆ.ಪ್ರಾಂಶುಪಾಲರಾದ ಡಾ. ಆರತಿ ದವೆ ಲಾಲ್ ಚಾಂದನಿ ಅವರು ಮಾತನಾಡಿರುವ ವಿಡಿಯೋ ಕಳೆದ ವಾರ ವೈರಲ್ ಆಗಿತ್ತು. ಲಾಲ್ ಚಾಂದನಿ ಅವರ ಸ್ಥಾನಕ್ಕೆ ಡಾ. ಆರ್ ಬಿ ಕಮಲ್ ಅವರನ್ನು ನಿಯೋಜಿಸಲಾಗಿದೆ.  

     ಕಳೆದ ವಾರ ಲಾಲ್ ಚಾಂದನಿ ಅವರನ್ನು ಝಾನ್ಸಿಯ ವೈದ್ಯಕೀಯ ಕಾಲೇಜಿಗೆ ವರ್ಗಾವಣೆ ಮಾಡಿರುವುದರ ಬಗ್ಗೆ ವದಂತಿಗಳು ಹಬ್ಬಿತ್ತು. ಆದರೆ ಅದನ್ನು ನಂತರ ನಿರಾಕರಿಸಲಾಗಿತ್ತು. ಈಗ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ. ಕೋವಿಡ್-19 ಹೆಚ್ಚು ಪ್ರಮಾಣದಲ್ಲಿ ಹರಡಲು ಕಾರಣರಾದ ತಬ್ಲಿಘಿ ಜಮಾತ್ ನ ಸದಸ್ಯರ ವಿರುದ್ಧ ಹೇಳಿಕೆ ನೀಡಿದ್ದ ಡಾ.ಲಾಲ್ ಚಾಂದನಿ, ಜಮಾತಿಗಳನ್ನು ಭಯೋತ್ಪಾದಕರೊಂದಿಗೆ ಹೋಲಿಕೆ ಮಾಡಿದ್ದರು. ಅಷ್ಟೇ ಅಲ್ಲದೇ ರಾಜ್ಯ ಸರ್ಕಾರ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದರು. 

       ಈ ವಿಡಿಯೋ ಹಾಗೂ ವಿವಾದಕ್ಕೆ ಸಂಬಂಧಿಸಿದಂತೆ ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಬ್ರಹ್ಮ್ ದೇವ್ ತಿವಾರಿ ಅವರು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಜನೀಶ್  ದುಬೆ ಅವರಿಗೆ ಸಲ್ಲಿಸಿದ್ದ ವರದಿಯ ಆಧಾರದಲ್ಲಿ ಲಾಲ್ ಚಾಂದನಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap