ಲಖನೌ:
ಗಂಗಾ ದೋಣಿ ಯಾತ್ರೆಯಲ್ಲಿರುವ ಉತ್ತರ ಪ್ರದೇಶ ಪೂರ್ವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬಾದೋಲಿಯಲ್ಲಿ ಸೀತಾ ಸಮಹಿತಾ ಸ್ಥಳದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 70 ವರ್ಷದಿಂದ ದೇಶಕ್ಕಾಗಿ ಕಾಂಗ್ರೆಸ್ ಏನು ಮಾಡಿಲ್ಲ ಎಂದು ಟೀಕಿಸುವ ಬಿಜೆಪಿ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ.
ಅವರು ಅಧಿಕಾರಕ್ಕೆ ಬಂದಾಗಿನಿಂದಲೂ ಏನೆಲ್ಲಾ ಮಾಡಿದ್ದಾರೆ ಎಂದು ಹೇಳುವಂತೆ ತಿಳಿಸಿದ್ದಾರೆ.ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕಿ ಮತ್ತು ಉತ್ತರ ಪ್ರದೇಶ ಎಐಸಿಸಿ ಕಾರ್ಯದರ್ಶಿಯೂ ಆಗಿರುವ ಪ್ರಿಯಾಂಕಾ ಗಾಂಧಿ ಗಂಗಾ ನದಿಯ ಸಂಗಮದಿಂದ ಮೂರು ದಿನಗಳ ಯಾತ್ರೆ ಆರಂಭಿಸಿದ್ದು.
ಪ್ರಯಾಗ್ ರಾಜ್ ನಿಂದ ಆರಂಭಗೊಂಡಿರುವ ಈ ಯಾತ್ರೆಯೂ ವಾರಾಣಸಿಯಲ್ಲಿ ಕೊನೆಗೊಳ್ಳಲಿದೆ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧವೂ ಪ್ರಿಯಾಂಕಾ ಕೆಂಡಕಾರಿದ್ದಾರೆ, ರಿಪೋರ್ಟ್ ಕಾರ್ಡ್ , ಪ್ರಚಾರ, ಎಲ್ಲದರಲ್ಲೂ ಚೆನ್ನಾಗಿದೆ ಎಂದು ತೋರಿಸಲಾಗುತ್ತಿದೆ. ಆದರೆ, ವಾಸ್ತವಿಕವಾಗಿ ಏನೂ ಆಗಿಲ್ಲ, ನಾನು ಪ್ರತಿದಿನ ಭೇಟಿ ಮಾಡುತ್ತಿರುವ ಜನರೆಲ್ಲರೂ ಒತ್ತಡದಲ್ಲಿಯೇ ಬದುಕು ಸಾಗಿಸುತ್ತಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ.