ಪಿವಿಎನ್ ಅವರು ಐ ಕೆ ಗುಜ್ರಾಲ್ ಮಾತು ಕೇಳಬೇಕಾಗಿತ್ತು..!

ನವದೆಹಲಿ:

    1984ರಲ್ಲಿ ಗೃಹ ಸಚಿವ ನರಸಿಂಹ ರಾವ್ ಅವರು ಐ ಕೆ ಗುಜ್ರಾಲ್ ಅವರ ಸಲಹೆಯನ್ನು ಕೇಳಿದ್ದರೆ ಸಿಖ್ ಹತ್ಯಾಕಾಂಡವನ್ನು ತಡೆಯಬಹುದಾಗಿತ್ತು ಎಂದು ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಹೇಳಿದ್ದಾರೆ.

    ದಿವಂಗತ ಐ ಕೆ ಗುಜ್ರಾಲ್ ಅವರ 100ನೇ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1984ರ ಹತ್ಯಾಕಾಂಡ ನಡೆದ ಸಮಯದಲ್ಲಿ ಗುಜ್ರಾಲ್ ಅವರು ಅಂದಿನ ಗೃಹ ಸಚಿವ ನರಸಿಂಹ ರಾವ್ ಅವರ ಬಳಿ ಹೋಗಿ ಪರಿಸ್ಥಿತಿ ತುಂಬಾ ಬಿಗಿಯಾಗಿದೆ. ಆದಷ್ಟು ಬೇಗ ಸೇನೆಯನ್ನು ಕಾರ್ಯಪ್ರವೃತ್ತವಾಗಿಸಿ ಎಂದಿದ್ದರು. ಅಂದು ಗುಜ್ರಾಲ್ ಅವರು ಹೇಳಿದ ಮಾತುಗಳನ್ನು ಕೇಳಿದ್ದರೆ 1984ರ ಹತ್ಯಾಕಾಂಡವನ್ನು ತಪ್ಪಿಸಬಹುದಾಗಿತ್ತು ಎಂದು ಹೇಳಿದ್ದಾರೆ.

     ತುರ್ತು ಪರಿಸ್ಥಿತಿ ನಂತರ ತಮ್ಮ ಹಾಗೂ ಗುಜ್ರಾಲ್ ನಡುವಿನ ಸಂಬಂಧ ಬೆಳೆದ ಬಗ್ಗೆ ಮಾತನಾಡಿದರು. ಅಂದು ಅವರು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದರು. ತುರ್ತು ಪರಿಸ್ಥಿತಿಯ ವ್ಯವಸ್ಥಾಪಕರ ಜೊತೆ ಅವರು ಕೆಲ ಭಿನ್ನಾಭಿಪ್ರಾಯ ಹೊಂದಿದ್ದರು. ಹೀಗಾಗಿ ಅವರನ್ನು ಯೋಜನಾ ಆಯೋಗದ ರಾಜ್ಯ ಖಾತೆ ಸಚಿವರಾಗಿ ವರ್ಗಾಯಿಸಲಾಗಿತ್ತು . ಆ ಹೊತ್ತಿನಲ್ಲಿ ನಾನು ಹಣಕಾಸು ಸಚಿವಾಲಯದ ಆರ್ಥಿಕ ಸಲಹೆಗಾರನಾಗಿದ್ದೆ. ನಂತರದ ದಿನಗಳಲ್ಲಿ ನಮ್ಮ ಸ್ನೇಹ ಬೆಳೆಯಿತು ಎಂದು ಮನಮೋಹನ್ ಸಿಂಗ್ ಈ ಸಮಯದಲ್ಲಿ ಸ್ಮರಿಸಿಕೊಂಡರು.

    ಐ ಕೆ ಗುಜ್ರಾಲ್ ಅವರು ದೇಶದ 12ನೇ ಪ್ರಧಾನಿಯಾಗಿ ಏಪ್ರಿಲ್ 1997ರಿಂದ ಮಾರ್ಚ್ 1998ರವರೆಗೆ ಪ್ರಧಾನಿಯಾಗಿದ್ದರು. ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಸ್ನೇಹ ಇರಿಸಿಕೊಂಡಿದ್ದ ಹಿನ್ನಲೆಯಲ್ಲಿ ಐದು ತತ್ವಗಳ ಗುಜ್ರಾಲ್ ಆಡಳಿತ ಎಂದು ಸುದ್ದಿಯಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap