ಜು.27ಕ್ಕೆ ಭಾರತದ ಬತ್ತಳಿಕೆ ಸೇರಲಿದೆ ರಫೇಲ್..!

ನವದೆಹಲಿ:

     ಇತ್ತ ಎಲ್ಒಸಿಯಲ್ಲಿ ಪಾಕಿಸ್ತಾನ, ಅತ್ತ ಎಲ್ಎಸಿಯಲ್ಲಿ ಚೀನಾ ತಂಟೆಗಳೆರಡನ್ನೂ ಪರಿಣಾಮಕಾರಿಯಾಗಿ ನಿಭಾಯಿಸುತ್ತಿರುವ ಭಾರತೀಯ ಸೇನೆಗೆ ಮತ್ತೊಂದು ಆನೆ ಬಲ ದೊರೆತಿದ್ದು, ಇದೇ ಜುಲೈ 27ರಂದು ಭಾರತಕ್ಕೆ ಮೊದಲ ರಫೇಲ್ ಯುದ್ಧ ವಿಮಾನ ಆಗಮಿಸಲಿದೆ.

     ಮೂಲಗಳ ಪ್ರಕಾರ ಇದೇ ಜುಲೈ 27ರಂದು ಫ್ರಾನ್ಸ್ ನಿರ್ಮಿತ ಐದು ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸಲಿದ್ದು, ಫ್ರಾನ್ಸ್ ನ ಇಸ್ಟ್ರೆಸ್ ನಿಂದ ರಫೇಲ್ ಯುದ್ಧ ವಿಮಾನಗಳು ಟೇಕ್ ಆಫ್ ಆಗಲಿದೆ. ಫ್ರಾನ್ಸ್ ನ ಟ್ಯಾಂಕರ್ ವಾಹಕದ ಮೂಲಕ ಭಾರತಕ್ಕೆ ಆಗಮಿಸುತ್ತಿವೆ. ಟ್ಯಾಂಕರ್ ವಾಹಕ ಪ್ರಯಾಣದ ನಡುವೆ ಯುಎಇಯ ಅಬುದಾಬಿಯ ಅಲ್ ಧಫ್ರಾ ಏರ್ ಬೇಸ್ ನಲ್ಲಿ ಇಂಧನಕ್ಕಾಗಿ ಇಳಿಯಲಿದೆ.

    ಬಳಿಕ ಜುಲೈ 27ರಂದು ಹರ್ಯಾಣದ ಅಂಬಾಲಾ ಏರ್ ಬೇಸ್ ನಲ್ಲಿ ಲ್ಯಾಂಡ್ ಆಗಲಿವೆ. ಬಳಿಕ ಜುಲೈ 29ರಂದು ಭಾರತೀಯ ವಾಯು ಪಡೆಗೆ ಸೇರ್ಪಡೆಯಾಗಲಿವೆ. ಹವಾಮಾನ ಸಹಕರಿಸಿದರೆ ಜುಲೈ 29ರಂದು ಹರಿಯಾಣದ ಅಂಬಾಲಾ ವಾಯು ನೆಲೆಯಲ್ಲಿ ಅವುಗಳ ಹಾರಾಟ ಪರೀಕ್ಷೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಬರುವ ಮತ್ತೊಂದು ಸ್ಕ್ವಾಡ್ರನ್‌ ಪಶ್ಚಿಮ ಬಂಗಾಳದಲ್ಲಿ ನಿಯೋಜನೆಗೊಳ್ಳಲಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

    ಭಾರತ ಮತ್ತು ಫ್ರಾನ್ಸ್ ದೇಶಗಳು ಒಟ್ಟು 36 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದು, ಈ ಪೈಕಿ ಮೊದಲ ಹಂತದಲ್ಲಿ ಐದು ವಿಮಾನಗಳು ಮಾತ್ರ ವಾಯುಪಡೆ ಸೇರಲಿವೆ. ಈ ಬಗ್ಗೆ ಮಾಹಿತಿ ನೀಡಿರುವ ವಿಂಗ್‌ ಕಮಾಂಡರ್‌ ಇಂದ್ರಾನಿಲ್‌ ನಂದಿ ಅವರು, ‘ಐಎಎಫ್‌ನ ವಾಯು ಮತ್ತು ನಿಲ್ದಾಣದ ಸಿಬ್ಬಂದಿಗೆ ರಫೇಲ್‌ನ ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಯ ಬಳಕೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಅವರಿಗೆ ಸಮಗ್ರ ತರಬೇತಿ ಕೂಡ ನೀಡಲಾಗುವುದು. ಮೊದಲ ಹಂತದಲ್ಲಿ ತ್ವರಿತವಾಗಿ ಅದರ ಹಾರಾಟ ತರಬೇತಿಗೆ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು  ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap