ಬಜೆಪಿಗೆ ಸವಾಲ್ ಹಾಕಿದ ರಾಹುಲ್ ಗಾಂಧಿ..!

ನವದೆಹಲಿ

    ಪಾಕಿಸ್ತಾನ ಪ್ರೇರಿತ ಪುಲ್ವಾಮಾ ದಾಳಿ ನಡೆದು ಫ.14ಕ್ಕೆ ಸರಿಯಾಗಿ ಒಂದು ವರ್ಷ ಕಳೆದಿದೆ. ಈ ಸಮಯದಲ್ಲಿ ರಾಹುಲ್ ಗಾಂಧಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮುಂದೆ ಮೂರು ಪ್ರಶ್ನೆಯಿಟ್ಟಿದ್ದಾರೆ .ಭಯೋತ್ಪಾದಕರು ಸೇನಾ ವಾಹನಗಳ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿ 40 ಮಂದಿ ಯೋಧರು ಹುತಾತ್ಮರಾಗಿದ್ದರು.

   ದೇಶದ ಭದ್ರತೆ ಅಪಾಯದಲ್ಲಿದ್ದು ಉಗ್ರಗಾಮಿಗಳ ಅಟ್ಟಹಾಸ ಮುಂದುವರೆದಿದೆ. ಅವರನ್ನು ಮಟ್ಟ ಹಾಕುತ್ತೇವೆ ಎಂದು ಮೋದಿ ಪಣತೊಟ್ಟಿದ್ದರು.ಸ್ವಲ್ಪ ದಿನಗಳ ನಂತರ ಪಾಕಿಸ್ತಾನದ ಬಾಲಾಕೋಟ್ ಮೇಲೆ ವಾಯು ದಾಳಿ ನಡೆಸಲಾಯಿತು. ಮರುದಿನ ಭಾರತ ಮತ್ತು ಪಾಕಿಸ್ತಾನ ಗಡಿಭಾಗದಲ್ಲಿ ಎರಡೂ ದೇಶದ ನಡುವೆ ವೈಮಾನಿಕ ಚಕಮಕಿ ನಡೆದವು. ಬಳಿಕ ಪಾಕಿಸ್ತಾನದಿಂದ ಹಲವು ವಿಮಾನಗಳ ಸೇವೆ ವ್ಯತ್ಯಯಗೊಂಡಿತ್ತು. ರಾಷ್ಟ್ರಪತಿ ಸೇರಿದಂತೆ ಯಾರಿಗೂ ಕೂಡ ಪಾಕಿಸ್ತಾನದ ಮೂಲಕ ವಿಮಾನ ಹಾರಾಟಕ್ಕೆ ಅವಕಾಶ ನೀಡಿರಲಿಲ್ಲ

ಇನ್ನು ರಾಹುಲ್ ಗಾಂಧಿ ಕೇಳಿದ ಪ್ರಶ್ನೆಗಳರಂದರೆ:

 1) ಪುಲ್ವಾಮಾ ದಾಳಿಯಿಂದ ಹೆಚ್ಚು ಲಾಭ ಮಾಡಿಕೊಂಡಿದ್ದು ಯಾರು?

2) ದಾಳಿ ಘಟನೆಯ ತನಿಖೆಯ ವರದಿ ಏನಾಯಿತು?

3) ದಾಳಿಗೆ ಕಾರಣವಾದ ಭದ್ರತಾ ಲೋಪಗಳಿಗೆ ಯಾರು ಹೊಣೆ?

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link