ಸಿದ್ದುಗೆ ಖಡಕ್ ವಾರ್ನಿಂಗ್ ನೀಡಿದ ರಾಹುಲ್…!!

ನವದೆಹಲಿ :  

       ದೇಶದೆಲ್ಲೆಡೆ ಲೋಕಸಭೆ ಚುನಾವಣೆ ಕಾವೇರುತ್ತಿರುವ ಬೆನ್ನಲೇ ರಾಜ್ಯದ ಸಮ್ಮಿಶ್ರ ಸರ್ಕಾ​ರಕ್ಕೆ ಧಕ್ಕೆಯಾದರೆ ಹಾಗೂ ಜೆಡಿ​ಎಸ್‌ ಜತೆಗಿನ ಮೈತ್ರಿಗೆ ಧಕ್ಕೆ​ಯಾ​ದರೆ ದೇಶಾ​ದ್ಯಂತ ಕಾಂಗ್ರೆಸ್‌ ಮೇಲೆ ಕೆಟ್ಟ ಪರಿ​ಣಾಮ ಬೀರ​ಲಿದೆ ಎಂಬ ಉದ್ದೇಶದಿಂದ ಸಿದ್ದುಗೆ ರಾಹುಲ್ ಖಡಕ್ ವಾರ್ನಿಂಗ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.

       ಸಮ್ಮಿಶ್ರ ಸರ್ಕಾ​ರಕ್ಕೆ ಧಕ್ಕೆ​ಯಾ​ಗು​ವಂತಹ ನಡ​ವ​ಳಿಕೆ ತೋರ​ದಂತೆ ಕಾಂಗ್ರೆಸ್‌ ಶಾಸ​ಕ​ರನ್ನು ನಿಯಂತ್ರಿಸಿ’ ಎಂದು ಎಐ​ಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ನ ರಾಜ್ಯ ನಾಯ​ಕ​ತ್ವಕ್ಕೆ ತಾಕೀತು ಮಾಡಿ​ದ್ದಾ​ರೆ.

       ಸಮ್ಮಿಶ್ರ ಸರ್ಕಾ​ರ​ದಲ್ಲಿ ಉಂಟಾ​ಗಿ​ರುವ ಹೊಂದಾ​ಣಿಕೆ ಕೊರತೆ ಹಿನ್ನೆ​ಲೆ​ಯಲ್ಲಿ ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಹಾಗೂ ಕೆಪಿ​ಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ​ರಾವ್‌ ಅವ​ರನ್ನು ದೆಹ​ಲಿಗೆ ಕರೆ​ಸಿ​ಕೊಂಡ ರಾಹುಲ್‌ ಗಾಂಧಿ ಅವರು ಈ ತಾಕೀತು ನೀಡಿ​ದರು ಎಂದು ಮೂಲ​ಗಳು ತಿಳಿ​ಸಿ​ವೆ.

       ‘ವೈಯ​ಕ್ತಿಕ ಒತ್ತಡಗಳು ಏನೇ ಇದ್ದರೂ ಮೈತ್ರಿಗೆ ಧಕ್ಕೆ​ಯಾ​ಗು​ವಂತಹ ಹೇಳಿ​ಕೆ​ಗ​ಳನ್ನು ಯಾರೂ ನೀಡ​ಬಾ​ರದು. ಈ ವಿಷ​ಯ​ವನ್ನು ಕಾಂಗ್ರೆಸ್‌ ಶಾಸ​ಕ​ರಿಗೆ ಸ್ಪಷ್ಟ​ಪ​ಡಿಸಿ. ಇದಾದ ನಂತ​ರವೂ ಯಾರಾ​ದರೂ ಮೈತ್ರಿ ಸರ್ಕಾ​ರದ ವಿರುದ್ಧ ಹೇಳಿಕೆ ನೀಡಿ​ದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಸಿದ್ದ​ರಾ​ಮಯ್ಯ ಹಾಗೂ ದಿನೇಶ್‌ ಗುಂಡೂ​ರಾ​ವ್‌ಗೆ ಸೂಚಿ​ಸಿ​ದ್ದಾರೆ ಎಂದು ಹೇಳಲಾಗಿದೆ .

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link