ರೈಲ್ವೆ ಖಾಸಗೀಕರಣ :ಈ ವರ್ಷ ರೈಲ್ವೆ ಮಾರ್ಗಗಳ ಹಾರಾಜು..!

ನವದೆಹಲಿ

   ಕಳೆದ ವರ್ಷ ಕೇಂದ್ರ ಸರ್ಕಾರ ರೈಲ್ವೆ ಉದಾರೀಕರಣದ ನಿಮಿತ್ತ ಸುಮಾರು 50 ರೈಲ್ವೆ ಸ್ಟೇಷನ್ ಗಳು ಮತ್ತು ಸುಮಾರು 150 ರೈಲುಗಳ ಖಾಸಗೀಕರಣಕ್ಕೆ ಮುಂದಾಗಿತ್ತು ಇದಕ್ಕೆ ಕೊಂಚ ವಿರೋಧ ವ್ಯಕ್ತವಾದರೂ ನಂತರದಲ್ಲಿ ಎಲ್ಲವೂ ಸರಿಹೋಗಿತ್ತು. ಈಗ ಿದಕ್ಕೆ ಮರುಜೀವ ಬಂದಿದೆ ಹೇಗೆಂದರೆ ದೇಶದೆಲ್ಲೆಡೆ ಖಾಸಗಿ ಪ್ರಯಾಣಿಕ ರೈಲುಗಳು ಓಡಾಡಲಿಕ್ಕಾಗಿ  ಭಾರತೀಯ ರೈಲ್ವೆ ಸಿದ್ಧತೆ ನಡೆಸಿದ್ದು ಸುಮಾರು 150 ಖಾಸಗಿ ಪ್ರಯಾಣಿಕ ರೈಲುಗಳ ಸಂಚಾರಕ್ಕೆ 100 ಮಾರ್ಗಗಳನ್ನು ರೈಲ್ವೆ ಅಯ್ದುಕೊಂಡಿದೆ. ಈ ಮಾರ್ಗಗಳಿಗೆ ಮುಂದಿನ ತಿಂಗಳು ಬಿಡ್ ನಡೆಸುವ ಸಾಧ್ಯತೆ ಇದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

   ಹಣಕಾಸು ಸಚಿವಾಲಯದ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ನಿರ್ಧಾರಣಾ ಸಮಿತಿ  ಈ ಪ್ರಸ್ತಾಪಕ್ಕೆ ಡಿ. 19ರಂದು ಅಧಿಕೃತ ಅನುಮೋದನೆ ನೀಡಿದ್ದೂ  ಈ ಮೂಲಕ 166 ವರ್ಷಗಳ ನಂತರ ಭಾರತದ ರೈಲ್ವೆ ಮಾರ್ಗಗಳಲ್ಲಿ ಖಾಸಗಿ ಪ್ರಯಾಣಿಕ ರೈಲುಗಳು ಸಂಚರಿಸಲಿವೆ ಇದರಿಂದಾಗಿ ಖಾಸಗಿ ಸಂಸ್ಥೆಗಳಿಗೆ ರೈಲು ಸಾರಿಗೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡುವ ಹಾದಿ ಸುಗಮವಾಗಿದೆ. 

   ಬೆಂಗಳೂರಿಗೆ ದೇಶದ ವಿವಿಧ ಪ್ರಮುಖ ನಗರಗಳಿಂದ ಒಟ್ಟು ಎಂಟು ಖಾಸಗಿ ರೈಲು ಮಾರ್ಗಗಳ ಪ್ರಸ್ತಾಪ ಇದರಲ್ಲಿದೆ. ಈಗಿರುವ ಸರ್ಕಾರಿ ಸ್ವಾಮ್ಯದ ರೈಲುಗಳ ಜತೆಗೆ ಖಾಸಗಿ ರೈಲುಗಳು ಸಹ ಕಾರ್ಯನಿರ್ವಹಿಸಲಿವೆ. ಇದರಿಂದ ರೈಲ್ವೆ ಸಾರಿಗೆ ವ್ಯವಸ್ಥೆ ಹೆಚ್ಚು ಸುಗಮವಾಗಲಿದೆ. ಇನ್ನು ಸುಧೀರ್ಘ ರೈಲು ಮಾರ್ಗಗಳೆಂದರೆ  ನವದೆಹಲಿ-ಬೆಂಗಳೂರು, ಮುಂಬೈ-ಕೋಲ್ಕತಾ, ಮುಂಬೈ-ಚೆನ್ನೈ, ಮುಂಬೈ ಗುವಾಹಟಿ, ನವದೆಹಲಿ-ಮುಂಬೈ, ತಿರುವನಂತಪುರಂ-ಗುವಾಹಟಿ, ನವದೆಹಲಿ-ಕೋಲ್ಕತಾ, ನವದೆಹಲಿ- ಚೆನ್ನೈ, ಕೋಲ್ಕತಾ-ಚೆನ್ನೈ ಮತ್ತು ಚೆನ್ನೈ-ಜೋಧಪುರ.

   ಇನ್ನು ಉದ್ದೇಷಿತ ಮಾರ್ಗಗಳೆಂದರೆ : ಪಟ್ನಾ-ಬೆಂಗಳೂರು, ಮುಂಬೈ-ವಾರಣಾಸಿ, ಮುಂಬೈ-ಪುಣೆ, ಮುಂಬೈ-ಲಕ್ನೋ, ಮುಂಬೈ-ನಾಗಪುರ, ನಾಗಪುರ-ಪುಣೆ, ಸಿಕಂದರಾಬಾದ್-ವಿಶಾಖಪಟ್ಟಣ, ಪುಣೆ-ಪಟ್ನಾ, ಚೆನ್ನೈ-ಕೊಯಮತ್ತೂರು, ಚೆನ್ನೈ-ಸಿಕಂದರಾಬಾದ್, ಸೂರತ್-ವಾರಣಾಸಿ, ಭುವನೇಶ್ವರ್-ಕೋಲ್ಕತಾ.

     ಪಟ್ನಾ, ಅಲಹಾಬಾದ್, ಅಮೃತಸರ, ಚಂಡೀಗಢ, ಕಾತ್ರಾ, ಗೋರಖ್‌ಪುರ, ಛಾಪ್ರಾ ಮತ್ತು ಭಾಗಲ್ಪುರದಿಂದ ರಾಜಧಾನಿ ನವದೆಹಲಿಗೆ ರೈಲು ಸಂಪರ್ಕದ ಯೋಜನೆಯಿದೆ. ಇನ್ನು ಮೆಟ್ರೊಯೇತರ ನಗರಗಳ ಮಾರ್ಗಗಳಲ್ಲಿ ಗೋರಖ್‌ಪುರ-ಲಕ್ನೋ, ಕೋಟಾ-ಜೈಪುರ, ಚಂಡೀಗಢ-ಲಕ್ನೋ, ವಿಶಾಖಪಟ್ಟಣ-ತಿರುಪತಿ ಮತ್ತು ನಾಗಪುರ-ಪುಣೆ ಮಾರ್ಗಗಳು ಇವೆ ಎಂದು ಸಚಿವಾಲಯ ತಿಳಿಸಿದೆ.

ಇನ್ನು ಜಗತ್ತಿನಲ್ಲಿ ಭಾರತ ಬಿಟ್ಟು ಖಾಸಗೀ ರೈಲ್ವೆ ಹೊಂದಿರುವ ದೇಶಗಳೆಂದರೆ : ಜಗತ್ತಿನಲ್ಲಿ ಈಗಾಗಲೆ ಖಾಸಗೀ ರೈಲ್ವೆ ಹೊಂದಿ ಅದರಲ್ಲಿ ಯಶಸ್ಸು ಗಳಿಸಿರುವ ರಾಷ್ಟ್ರಗಳು ಬೆರಳೆಣಿಕೆಯಷ್ಟು ಮಾತ್ರವೇ ಅವುಗಳಲ್ಲಿ ಪ್ರಮುಖವಾಗಿ ಅಮೆರಿಕ ಸಂಯುಕ್ತ ರಾಜ್ಯಗಳ ಸಂಸ್ಥಾನ , ಜಪಾನ್ ಪ್ರಮುಖವಾದವುಗಳು.

ಇದರ ಸಾಧಕ ಬಾದಕಗಳೆಂದರೆ :

ಸಾಧಕಗಳು :  ರೈಲ್ವೆ ಇಲಾಖೆ ಹೇಳುವ ಪ್ರಕಾರ ಖಾಸಗೀಕರಣದಿಂದ ಸಂಪನ್ಮೂಲ ವೃಧಿಯಾಗುತ್ತದೆ , ಹೆಚ್ಚು ಜನರಿಗೆ ತಲುಪಲು ಸಾಧ್ಯವಾಗುತ್ತದೆ , ಉತ್ತಮ ಗುಣಮಟ್ಟದ ಸೌಲಭ್ಯಗಳನ್ನು ನೀಡಬಹುದು,

ಬಾದಕಗಳು  : ಅತಿ ಹೆಚ್ಚು ದರಗಳು , ಸೀಮಿತ ಪರಿದಿ ಕಾರ್ಯಚರಣೆ ,ಖಾಸಗಿ ಸಂಸ್ಥೆಗಳಿಂದ ರೈಲುಗಳ ಸಮಯ ನಿರ್ಧಾರಣೆ ಇನ್ನು ಮುಂತಾದ ತೊಂದರೆಗಳು ಇರುತ್ತವೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

  

Recent Articles

spot_img

Related Stories

Share via
Copy link
Powered by Social Snap