ಜೈಪುರ:
ಕಾಂಗ್ರೆಸ್ ಜೊತೆ ವಿಲೀನಗೊಂಡಿರುವ ಆರು ಬಿಎಸ್ ಪಿ ಪಕ್ಷದ ಶಾಸಕರು ಮತ್ತು ವಿಧಾನಸಭೆ ಸ್ಪೀಕರ್ ಗೆ ಹೈಕೋರ್ಟ್ ನೋಟಿಸ್ ನೀಡಿದೆ.
ಆಡಳಿತರೂಢ ಕಾಂಗ್ರೆಸ್ ಜೊತೆ ಬಿಎಸ್ ಪಿ ಶಾಸಕರು ವಿಲೀನಗೊಂಡಿರುವುದನ್ನು ಪ್ರಶ್ನಿಸಿ ಬಿಎಸ್ ಪಿ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಈ ಸಂಬಂಧ ಆಗಸ್ಟ್ 11ರೊಳಗೆ ಪ್ರತ್ಯುತ್ತರ ಸಲ್ಲಿಸುವಂತೆ ಸ್ಪೀಕರ್ ಮತ್ತು ಆರು ಶಾಸಕರಿಗೆ ನೋಟಿಸ್ ನೀಡಿದೆ.
2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಂದೀಪ್ ಯಾದವ್, ವಾಜಿಬ್ ಅಲಿ, ದೀಪ್ಚಂದ್ ಖೇರಿಯಾ, ಲಖನ್ ಮೀನಾ, ಜೋಗೇಂದ್ರ ಅವನಾ ಮತ್ತು ರಾಜೇಂದ್ರ ಗುಧಾ ಅವರು ಬಹುಜನ ಸಮಾಜವಾದಿ ಪಕ್ಷದಿಂದ ಜಯಗಳಿಸಿದರು. ನಂತರ ಸೆಪ್ಟೆಂಬರ್ 2019ರಲ್ಲಿ ಬಿಎಸ್ ಪಿಯ 6 ಶಾಸಕರ ಕಾಂಗ್ರೆಸ್ ಜೊತೆ ವಿಲೀನಗೊಂಡಿತ್ತು.
![](https://prajapragathi.com/wp-content/uploads/2020/07/Untitled-2-1.gif)