ರಾಜೀವ್ ಶರ್ಮಾ ಬಂಧನ : ಪ್ರೆಸ್ ಕ್ಲಬ್ ಆಫ್ ಇಂಡಿಯಾ ಖಂಡನೆ

ನವದೆಹಲಿ:

    ಹಿರಿಯ ಪತ್ರಕರ್ತ ರಾಜೀವ್ ಶರ್ಮಾ ಅವರನ್ನು ಬಂಧಿಸಿರುವ ದೆಹಲಿ ಪೊಲೀಸರ ಕ್ರಮವನ್ನು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಖಂಡಿಸಿದೆ .ದೀರ್ಘಕಾಲದಿಂದ  ಸ್ವತಂತ್ರ ಪತ್ರಕರ್ತರಾಗಿರುವ  ಮತ್ತು ಪ್ರೆಸ್ ಕ್ಲಬ್ ಆಫ್ ಇಂಡಿಯಾದ ಸದಸ್ಯರಾಗಿರುವ  ರಾಜೀವ್ ಶರ್ಮಾ ಅವರ ಬಂಧನವನ್ನು ಕೇಳಿ ನಾವು ಬೆರಗಾಗಿದ್ದೇವೆ ಎಂದು ಪ್ರೆಸ್ ಕ್ಲಬ್ ಆಫ್ ಇಂಡಿಯಾದ ಅಧ್ಯಕ್ಷ ಆನಂದ್ ಕೆ ಸಹಯ್ ಮತ್ತು ಪ್ರಧಾನ ಕಾರ್ಯದರ್ಶಿ ಅನಂತ್ ಬಾಗೈಟ್ಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

   ವಿಶೇಷ ಬ್ರಾಂಚಿನ ಸಂಶಯಾಸ್ಪದ ದಾಖಲೆಯ ಕಾರಣದಿಂದಾಗಿ ರಾಜೀವ್ ಶರ್ಮಾ ಅವರನ್ನು ಬಂಧಿಸಲಾಗಿದೆ. ದೆಹಲಿ ಪೊಲೀಸರ ದಾಖಲೆಯೂ ಅಷ್ಟೇನೂ ಸಮಂಜಸವಾಗಿಲ್ಲ ಎಂದು ಅವರು ಹೇಳಿದ್ದಾರೆ.ಪೊಲೀಸರು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆಯಂತೆ ಪೊಲೀಸರ ಕ್ರಮವು ಸರ್ವಾಧಿಕಾರಿ ಧೋರಣೆಯಿಂದ ಕೂಡಿದೆ ಎಂದು ಹೇಳಲು ನಮಗೆ ಯಾವುದೇ ಹಿಂಜರಿಕೆಯಿಲ್ಲ, ಅಸ್ಪಷ್ಟ ಅಥವಾ ಪ್ರಶ್ನಾರ್ಹ ಪರಿಗಣನೆಗಳಿಂದ ಪ್ರೇರಿತವಾಗಿವೆ ಎಂದಿದ್ದಾರೆ.
 
   2002ರಲ್ಲಿ ಕಾಶ್ಮೀರ ಟೈಮ್ಸ್ ನ ಹಿರಿಯ ಪತ್ರಕರ್ತ ಇಫ್ತಿಕಾರ್ ಗಿಲಾನಿಯನ್ನು ಸೇನಾ ಚಲನ ವಲನ ಪತ್ತೆ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು. ಏಳು ತಿಂಗಳ ಕಾಲ ತಿಹಾರ್ ಜೈಲಿಗೆ ಕಳುಹಿಸಿ ಇತರ ಖೈದಿಗಳಿಂದ ಹಲ್ಲೆ ನಡೆಸಲಾಗಿತ್ತು. ನಂತರ ಸೇನೆಯದ್ದು ನಕಲಿ ಪ್ರಕರಣ ಎಂಬುದು ಗೊತ್ತಾದ ಬಳಿಕ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಅದೇ ರೀತಿಯಲ್ಲಿ ಇರಾನ್‌ನ ಅಧಿಕೃತ ಸುದ್ದಿ ಸಂಸ್ಥೆಗಾಗಿ ಬರೆದ ದೆಹಲಿ ಪತ್ರಕರ್ತನನ್ನು ಬಂಧಿಸಲಾಗಿತ್ತು.
   
    ಅದು ಕೂಡಾ ಸುಳ್ಳಿನ ಪ್ರಕರಣ ಎಂದು ಗೊತ್ತಾದ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿತ್ತು. ಜೆಎನ್ ಯು ಮತ್ತು ಜಾಮೀಯಾ ವಿಶ್ವವಿದ್ಯಾಲಯದ ಕನ್ಹಯ್ಯಾ ಕುಮಾರ್ ಮತ್ತು ಉಮರ್ ಖರೀದ್ ಅವರನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿತ್ತು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
 
    ಚೀನಾ ಪರ ಗೂಢಚರ್ಯೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ರಾಜೀವ್ ಶರ್ಮಾ ಅವರನ್ನು ಸೆಪ್ಟೆಂಬರ್ 14 ರಂದು ಬಂಧಿಸಲಾಗಿದ್ದು, ಆರು ದಿನಗಳ ಕಾಲ ಪೊಲೀಸ್ ರಿಮ್ಯಾಂಡ್ ನಲ್ಲಿದ್ದಾರೆ. ಅಂತಿಮವಾಗಿ, ಈ ವಿಷಯವು ಮ್ಯಾಜಿಸ್ಟ್ರೇಸಿ ಮತ್ತು ಬಹುಶಃ ನ್ಯಾಯಾಂಗದ ಉನ್ನತ ಮಟ್ಟವನ್ನು ತಲುಪುತ್ತದೆ. ದೇಶದಲ್ಲಿ ಎಲ್ಲಿಯಾದರೂ ಪತ್ರಕರ್ತರನ್ನು ಬಂಧಿಸುವ ಎಲ್ಲಾ ಸಂದರ್ಭಗಳಲ್ಲಿ, ಪೊಲೀಸರು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಪ್ರಸಾರ ಮಾಧ್ಯಮದ ಸ್ವಯಂ-ನಿಯಂತ್ರಕ ಸಂಸ್ಥೆಯನ್ನು ತಕ್ಷಣವೇ ತಿಳಿಸಬೇಕು ಮತ್ತು ಸಂಬಂಧಿತ ವಿವರಗಳನ್ನು ಒದಗಿಸಬೇಕು.ಆದ್ದರಿಂದ ರಕ್ಷಣಾ ಕಾರ್ಯವನ್ನು ನಿರ್ಮಿಸಲು ಸಾಧ್ಯವಿದೆ ಎಂದು ಪ್ರೆಸ್ ಕ್ಲಬ್ ಆಫ್ ಇಂಡಿಯಾ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap