ಎನ್ ಐ ಎ ಬೆನ್ನು ತಟ್ಟಿದ ರಾಜನಾಥ ಸಿಂಗ್ ..!!

ನವದೆಹಲಿ: 
        ಕಾಶ್ಮೀರದ ಮೇಲೆ ಸದಾ ಕಾಲ ತನ್ನ ಕಣ್ಣಿಟ್ಟಿರುವ ಪಾಪಿ ಪಾಕಿಸ್ತಾನಕ್ಕೆ ಜೋತೆಯಾಗಿ ಐಸಿಸ್ ಕೂಡ ಕೈಜೊಡಿಸಿ ಮಾಡುತ್ತಾ ಇರುವ ತರಲೆಗಳನ್ನು ಮಟ್ಟಹಾಕಲು ಎನ್ ಐ ಎ ಮಾಡಿದ ಕಾರ್ಯಗಳನ್ನು ಮೆಚ್ಚಿಕೊಂಡು ರಾಜನಾಥ ಸಿಂಗ್ ಪ್ರಶಂಸೆ ನೀಡಿದ್ದಾರೆ.  ಉಗ್ರರ ಅಡಗು ತಾಣಗಳು ಮತ್ತು ಹಣದ ಮೂಲಗಳ ಮೇಲೆ ಭಾರೀ ಕಾರ್ಯಾಚರಣೆ ನಡೆಸಿ ಅವರ ಆಟಾಟೋಪಗಳಿಗೆ ಕಡಿವಾಣ ಹಾಕಿರುವ ಕಾರ್ಯಕ್ಕೆ ಕೇಂದ್ರ ಮತ್ತು ಭಾರತದ ಪ್ರಜೆಗಳ ಪರವಾಗಿ ಧನ್ಯವಾದ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. 
        ರಾಜಧಾನಿ ದೆಹಲಿ ಹಾಗೂ ಉತ್ತರಪ್ರದೇಶದಲ್ಲಿದ್ದ ಐಸಿಸ್ ಅಡಗುತಾಣಗಳ ಮೇಲೆ ಎನ್ಐಎ ದಾಳಿ ನಡೆಸಿದ್ದರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಇಸಿಸ್ ಅಡಗುತಾಣಗಳ ಮೇಲಿನ ದಾಳಿ ದೊಡ್ಡ ಯಶಸ್ಸಿಗೆ ಪ್ರೇರಣೆಯಾಗಿದೆ ಎಂದು ಎನ್ ಐ ಎ ಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದಾರೆ. 
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap