ನವದೆಹಲಿ:
ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ದಿಇನದಿಂದ ಒಂದೊಂದೇ ಕುತೂಹಲಕಾರಿ ಫಲಿತಾಂಶಗಳ ವರದಿ ಹೊರಬರತೊಡಗಿದೆ. ಚುನಾವಣೆಯಲ್ಲಿ ಗೆಲ್ಲಲು ಹಣಬಲ ಒಂದಿದ್ದರೆ ಸಾಕು ಎಂದು ತಿಳಿದು ಚುನಾವಣೆಗೆ ನಿಲ್ಲುವವರಿಗೆ ಈ ಚುನಾವನೆ ಸರಿಯಾದ ಪಾಠ ಕಲಿಸಿದೆ ಮತ್ತು ಧನ ಬಲದ ಜೊತೆಯಲ್ಲಿ ಜನಬಲವೂ ಬೇಕು ಎಂದು ಸಾರಿ ಹೇಳಿದೆ.
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ದೇಶದ ಹತ್ತು ಮಂದಿ ಶ್ರೀಮಂತರ ಪೈಕಿ ಕೇವಲ ಐದು ಅಭ್ಯರ್ಥಿಗಳು ಮಾತ್ರ ಲೋಕಸಭೆ ಪ್ರವೇಶಿಸಿದ್ದಾರೆ. ಐದು ಅಭ್ಯರ್ಥಿಗಳು ಸೋಲಿನ ರುಚಿ ಕಂಡಿದ್ದಾರಲ್ಲದೆ ರಮೇಶ್ ಕುಮಾರ್ ಶರ್ಮಾ ಬಿಹಾರದ ಪಾಟಲಿಪುತ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಚುನಾವಣಾ ಆಯೋಗದ ಅಂಕಿಅಂಶದ ಪ್ರಕಾರ, ಶರ್ಮಾ ಠೇವಣಿ ಕಳೆದುಕೊಂಡಿದ್ದು, ಕೇವಲ 1,556 ಮತಗಳನ್ನಷ್ಟೇ ಪಡೆದಿದ್ದಾರೆ ಎಂದು ತಿಳಿಸಿದೆ. ರಮೇಶ್ ಕುಮಾರ್ ಶರ್ಮಾ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿತ್ ನಲ್ಲಿ 1,107 ಕೋಟಿ ರೂಪಾಯಿ ಆಸ್ತಿಯ ಒಡೆಯ ಎಂದು ಘೋಷಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ .