ನವದೆಹಲಿ
ಯೆಸ್ ಬ್ಯಾಂಕನ್ನು ಭಾರತೀಯ ರಿಸರ್ವ್ ಬ್ಯಾಂಕ್ ಸೂಪರ್ ಸೀಡ್ ಮಾಡಿಕೊಂಡಿದೆ. ಇದರಿಂದಾಗಿ ಯೆಸ್ ಬ್ಯಾಂಕ್ ಮೂಲಕ ನಡೆಯುತ್ತಿದ್ದ ಆರ್ಥಿಕ ವ್ಯವಹಾರಕ್ಕೆ ಯೆಸ್ ಬ್ಯಾಂಕ್ ಜೊತೆ ಸಹಭಾಗಿತ್ವ ಹೊಂದಿದ್ದ ಡಿಜಿಟಲ್ ಪೇಮೆಂಟ್ ಫೋನ್ ಪೇ ಆಪ್ಲಿಕೇಷನ್ ಬಳಕೆಗೆ ಬ್ರೇಕ್ ಬಿದ್ದಿದೆ. ಆದರೆ, ಸಂಕಷ್ಟದಲ್ಲಿರುವ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ.
ಗ್ರಾಹಕರು ಈಗ ಎಟಿಎಂನಿಂದ ಹಣ ವಿಥ್ ಡ್ರಾ ಮಾಡಿಕೊಳ್ಳಬಹುದಾಗಿದೆ. ಯೆಸ್ ಬ್ಯಾಂಕ್ ಡೆಬಿಟ್ ಕಾರ್ಡನ್ನು ಯೆಸ್ ಬ್ಯಾಂಕ್ ಎಟಿಎಂ ಅಲ್ಲದೆ ಇತರೆ ಎಟಿಎಂ ಬ್ಯಾಂಕ್ ಎಟಿಎಂಗಳಲ್ಲೂ ಬಳಸಬಹುದು ಎಂದು ಯೆಸ್ ಬ್ಯಾಂಕ್ ಅಧಿಕೃತವಾಗಿ ಟ್ವೀಟ್ ಮಾಡಿದೆ.
ಯೆಸ್ ಬ್ಯಾಂಕ್ ನಲ್ಲಿ ಶೇ 49ರಷ್ಟು ಪಾಲನ್ನು ಅಂದರೆ ಸರಿ ಸುಮಾರು 2450 ಕೋಟಿ ರು ಮೊತ್ತಕ್ಕೆ ಖರೀದಿಸುವುದಾ ಗಿ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ಘೋಷಿಸಿದೆ.ಯೆಸ್ ಬ್ಯಾಂಕ್ 255 ಕೋಟಿ ರು ಮೌಲ್ಯ ಷೇರು ಲಭ್ಯವಿದ್ದು, ಪ್ರತಿ ಷೇರಿಗೆ 2ರೂ ದರ ಹೊಂದಿದೆ. ಪ್ರತಿ ಷೇರಿಗೆ 10 ರು ನಂತೆ 2450 ಕೋಟಿ ರು ಮೌಲ್ಯವನ್ನು ಎಸ್ ಬಿಐ ಘೋಷಿಸಿದೆ.
ಎಸ್ ಬಿಐ ಹೂಡಿಕೆ ನಂತರ ಮುಖ್ಯ ಕಾರ್ಯಕಾರಿ, ವ್ಯವಸ್ಥಾಪಕ ನಿರ್ದೇಶಕ, ನಾನ್ ಎಕ್ಸಿಕ್ಯೂಟಿವ್ ಚೇರ್ಮನ್ ಹಾಗೂ ನಾನ್ ಎಕ್ಸಿಕ್ಯೂಟಿವ್ ನಿರ್ದೇಶಕರನ್ನು ಒಳಗೊಂಡ ನಿರ್ದೇಶಕರ ಮಂಡಳಿಯನ್ನು ರಚಿಸಲಾಗುತ್ತದೆ.ಯೆಸ್ ಬ್ಯಾಂಕ್ ವ್ಯವಹಾರ, ಎಟಿಎಂ ವಿಥ್ ಡ್ರಾ ಕುರಿತಂತೆ ಆರ್ ಬಿಐ ನಿರ್ದೇಶನದಂತೆ ಹಣಕಾಸು ಇಲಾಖೆ ಮಾರ್ಚ್ 5ರಂದು ಹೊರಡಿಸಿದ ಸುತ್ತೋಲೆಯಂತೆ ಹಣ ವಿತ್ ಡ್ರಾ ಮಾಡಲು 50,000 ರೂಪಾಯಿಗಳ ಮಿತಿ ಹೇರಲಾಗಿದ್ದು, ಮಾರ್ಚ್ 5ರಿಂದ ಏಪ್ರಿಲ್ 3ರ ವರೆಗೆ ನಿರ್ಬಂಧ ಜಾರಿಯಲ್ಲಿರಲಿದೆ.
ಯೆಸ್ ಬ್ಯಾಂಕ್ ಜೊತೆಗೆ ಡಿಜಿಟಲ್ ಪೇಮೆಂಟ್ ಒಪ್ಪಂದ ಮಾಡಿಕೊಂಡಿದ್ದ ಸಹ ಸಂಸ್ಥೆಗಳ ವ್ಯವಹಾರಕ್ಕೂ ತೊಂದರೆ ಉಂಟಾಗಿದೆ. ಮುಖ್ಯವಾಗಿ ಫೋನ್ ಪೇ ವ್ಯವಹಾರ ಕೂಡಾ ಸರಿಯಾಗಿ ಆಗುತ್ತಿಲ್ಲ. ಈ ಕುರಿತಂತೆ ಮುಖ್ಯ ಕಾರ್ಯಕಾರಿ ಸಮೀರ್ ನಿಗಮ್ ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ