ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ RBI ವರದಿ..!

ನವದೆಹಲಿ:

     ದೇಶದ ಬ್ಯಾಂಕಿಂಗ್ ಜಾಲದಲ್ಲಿಯೇ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಬರೋಬ್ಬರಿ 76000 ಕೋಟಿರೂಗಳಷ್ಟು ವಸೂಲಾಗದ  ಮತ್ತು ನಿರುಪಯುಕ್ತವಾದ ಸಾಲ ಇದೆ ಎಂದು ರಿಸರ್ವ್ ಬ್ಯಂಕಿನ ಆರ್ ಟಿ ಐ ವರದಿ ತಿಳಿಸಿದೆ.

    ಇನ್ನು ಇದರ ವಿಂಗಡನೆಯನ್ನು ಸಹ ನೀಡಿರುವ ರಿಸರ್ವ್ ಬ್ಯಂಕ್ 100 ಕೋಟಿ ಮತ್ತು ಅದಕ್ಕಿಂತಲೂ ಹೆಚ್ಚು ಬಾಕಿ ಉಳಿಸಿಕೊಂಡಿರುವವರ ಸಂಖ್ಯೆ ಸುಮಾರು 220 ಜನ , ಮಾರ್ಚ್ 31, 2019 ರಲ್ಲಿ ನಡೆದ ಲೆಕ್ಕಾಚಾರದಲ್ಲಿ ಎಸ್‍ಬಿಐ ವಸೂಲಾಗದೆ /ನಿರುಪಯುಕ್ತವಾದ ಸಾಲದ ಮೊತ್ತವು ಸುಮಾರು 37,700 ಕೋಟಿಗಳಷ್ಟಿದೆ ಎಂದು ಎಸ್ ಬಿ ಐ ಘೋಷಿಸಿದೆ ಮತ್ತು 33 ಸಾಲಗಾರರು 500 ಕೋಟಿ ರೂ ಮತ್ತು ಅದಕ್ಕಿಂತ ಹೆಚ್ಚಿನ ಸಾಲವನ್ನು ಹೊಂದಿದ್ದಾರೆ ಎಂದು ವಾರ್ಷಿಕ ವರದಿಯಲ್ಲಿ ತಿಳಿಸಿದೆ.

   ಮಾಹಿತಿ ಹಕ್ಕು ಕಾಯ್ದೆಯಡಿ ಆರ್‍ಬಿಐ ಇತ್ತೀಚಿಗೆ ನೀಡಿದ ಮಾಹಿತಿಯಲ್ಲಿ ಈ ವರ್ಷದ ಮಾರ್ಚ್ 31ರ ವರೆಗೆ ಬ್ಯಾಂಕ್ ಗಳು ನೀಡಿರುವ ಮಾಹಿತಿ ವಿಘಟನೆ ಪ್ರಕಾರ ವರದಿಯಲ್ಲಿ 100 ಕೋಟಿ ಮತ್ತು 500 ಕೋಟಿ ರೂ.ಗಿಂತ ಹೆಚ್ಚಿನ ಸಾಲವನ್ನು ನಮೂದಿಸಲಾಗಿದೆ ಎಂದು ಆರ್ ಬಿ ಐ ತಿಳಿಸಿದೆ .

    ಕಳೆದ ಮೂರು ವರ್ಷಗಳಲ್ಲಿ, ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯು 416 ಡೀಫಾಲ್ಟರ್ಗಳ ನಿಷ್ಕ್ರಿಯ ಸಾಲಗಳ ಕಾರಣದಿಂದಾಗಿ ಸರಿಸುಮಾರು 1.76 ಲಕ್ಷ ಕೋಟಿ ರೂ.ಗಳನ್ನು ಕಳೆದುಕೊಂಡಿದೆ – ಪ್ರತಿಯೊಬ್ಬರು 100 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಬಾಕಿ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ. 

     ವಾಣಿಜ್ಯ ಬ್ಯಾಂಕುಗಳಿಂದ 100 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಸಾಲ ಪಡೆದ ಸಂಸ್ಥೆಗಳ ಒಟ್ಟು ಮೊತ್ತವು 2.75 ಲಕ್ಷ ಕೋಟಿ ರೂ ಆಗಿದೆ .ಇತ್ತೀಚಿನ ಅಂಕಿಅಂಶಗಳು ಹೇಳುವಂತೆ ಸುಮಾರು 67,600 ಕೋಟಿ ರೂ ಮೊತ್ತವು 500 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಸಾಲಗಳಿಗೆ ಸಂಬಂಧಿಸಿದಂತೆ ಕೆಟ್ಟ ಸಾಲವೆಂದು ಘೋಷಿಸಲಾಗಿದೆ ಎಂದು ತಿಳಿದು ಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link