ನವದೆಹಲಿ:
ಮಾಹಿತಿ ಹಕ್ಕು ಕಾಯ್ದೆಯಡಿ ಬ್ಯಾಂಕುಗಳ ವಾರ್ಷಿಕ ತಪಾಸಣೆ ವರದಿಯ ಮಾಹಿತಿಯನ್ನು ಬಹಿರಂಗಪಡಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ರಿಸರ್ವ್ ಬ್ಯಾಂಕ್ ಗೆ ಆದೇಶ ನೀಡಿದೆ. ಕಾನೂನಿನಡಿಯಲ್ಲಿ ವಿನಾಯಿತಿ ನೀಡದ ಹೊರತು ಆರ್ ಬಿಐ ಮಾಹಿತಿ ಬಹಿರಂಗಪಡಿಸದೆ ಇರುವಂತಿಲ್ಲ ಎಂದು ಕೂಡ ಹೇಳಿದೆ.
ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ನೇತೃತ್ವದ ನ್ಯಾಯಪೀಠ, ಆರ್ ಬಿಐಗೆ ವಾರ್ಷಿಕ ತಪಾಸಣೆ ವರದಿ ಬಹಿರಂಗಪಡಿಸುವ ಕುರಿತು ತನ್ನ ನೀತಿಯನ್ನು ಪರಾಮರ್ಶಿಸುವಂತೆ ಕೂಡ ಹೇಳಿದೆ. ಇದು ಕಾನೂನಿನಡಿಯಲ್ಲಿ ಪಾಲಿಸಬೇಕಾದ ಕರ್ತವ್ಯವಾಗಿದೆ ಎಂದು ಕೂಡ ನ್ಯಾಯಪೀಠ ಹೇಳಿದೆ. ಆರ್ ಬಿಐ ವಿರುದ್ಧ ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಈ ಬಾರಿ ಮುಂದುವರಿಸದ ಸುಪ್ರೀಂ ಕೋರ್ಟ್ ಕಾನೂನಿನ ಪಾರದರ್ಶಕತೆ ದೃಷ್ಟಿಯಿಂದ ವಾರ್ಷಿಕ ತಪಾಸಣೆ ವರದಿಯನ್ನು ಅನುಸರಿಸಲು ಆರ್ ಬಿಐಗೆ ಕೊನೆ ಅವಕಾಶ ನೀಡಲಾಗುತ್ತದೆ ಎಂದು ಹೇಳಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಆರ್ ಬಿಐ ವಿವರ ನೀಡದಿರುವ ಪ್ರಕರಣವನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ತೆಗೆದುಕೊಂಡಿದ್ದು ಮುಂದಿನ ದಿನಗಳಲ್ಲಿ ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದೆ.ಕಳೆದ ಜನವರಿಯಲ್ಲಿ ಬ್ಯಾಂಕುಗಳ ವಾರ್ಷಿಕ ತಪಾಸಣೆ ವರದಿಯನ್ನು ಬಹಿರಂಗಪಡಿಸದ ಆರ್ ಬಿಐಗೆ ನ್ಯಾಯಾಂಗ ನಿಂದನೆ ನೊಟೀಸ್ ಜಾರಿ ಮಾಡಲಾಗಿತ್ತು.
ತಾನು ವಾರ್ಷಿಕವಾಗಿ ನಡೆಸುವ ಬ್ಯಾಂಕ್‍ಗಳ ತಪಾಸಣೆ ಕುರಿತ ವರದಿಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗ ಗೊಳಿಸುವಂತೆ ತಾನು ನೀಡಿದ್ದ ಸೂಚನೆಯನ್ನು ಪಾಲಿಸಲು ಸುಪ್ರೀಂಕೋರ್ಟ್ ಭಾರತೀಯ ರಿಸರ್ವ್ ಬ್ಯಾಂಕ್‍ಗೆ ಕೊನೇ ಅವಕಾಶ ನೀಡಿದೆ.
ಆರ್‍ಟಿಐ ಅಡಿ ಈ ಮಾಹಿತಿಯನ್ನು ಬಹಿರಂಗಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ಈ ಹಿಂದೆಯೇ ಆರ್ ಬಿ ಐಗೆ ಸೂಚನೆ ನೀಡಿತ್ತು. ಆದರೆ, ಆರ್ ಬಿ ಐ ಅದನ್ನು ಈವರೆಗೂ ಪಾಲಿಸಿರಲಿಲ್ಲ. ಆದ್ದರಿಂದ, ಇದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಆರ್ ಬಿ ಐ ಅನ್ನು ಸುಪ್ರೀಂಕೋರ್ಟ್ ಎಚ್ಚರಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
