ನವದೆಹಲಿ: 

ಅನಿರೀಕ್ಷಿತ ಬೆಳವಣಿಗೆಯಲ್ಲಿ ಆರ್ ಬಿಐ ಗವರ್ನರ್ ಆಗಿದ್ದ ಊರ್ಜಿತ್ ಪಟೇಲ್ ದಿಢೀರ್ ರಾಜೀನಾಮೆಯಿಂದ ದಿಕ್ಕು ಕಾಣದಾದ ಭಾರತೀಯ ರಿಸರ್ವ್ ಬ್ಯಾಂಕ್’ ಗೆ ನೂತನ ಸಾರಥಿಯಾಗಿ ಮಾಜಿ ಐಎಎಸ್ ಅಧಿಕಾರಿ ಶಕ್ತಿಕಾಂತ್ ದಾಸ್ (61) ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಈ ಮೂಲಕ ತೆರವಾಗಿದ್ದ ಸ್ಥಾನವನ್ನು ಕೇವಲ ಒಂದೇ ದಿನದಲ್ಲಿ ಭರ್ತಿ ಮಾಡುವ ಮೂಲಕ ಪಟೇಲ್ ನೀಡಿದ್ದ ಆಘಾತವನ್ನು ಸರಿಪಡಿಸುವ ಯತ್ನಕ್ಕೆ ಕೇಂದ್ರ ಮಾಡಿದೆ.
ಊರ್ಜಿತ್ ಪಟೇಲ್ ರಾಜೀನಾಮೆಂಯಿಂದಾಗಿ ತೆರವಾಗಿದ್ದ ಹುದ್ದೆಂಗೆ ಕೂಡಲೇ ಹಂಗಾಮಿ ಗವರ್ನರ್ ನೇಮಕ ಮಾಡುವ ಸಾಧ್ಯತೆ ಇದೆ ಎಂಬ ವರದಿಗಳು ಇದ್ದವಾದರೂ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ನೇಮಕಾತಿ ಕುರಿತು ಸಂಪುಟ ಸಮಿತಿಯು, ಮಂಗಳವಾರವೇ ಶಕ್ತಿಕಾಂತ್ ದಾಸ್ ಅವರನ್ನು ನೇಮಕ ಮಾಡಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
