ಕೊನೆಯ ದಿನದಂದು ದಾಖಲೆಯ ಆದಾಯ ತೆರಿಗೆ ವಿವರ ಸಲ್ಲಿಕೆ

ನವದೆಹಲಿ

      ಆದಾಯ ತೆರಿಗೆ ವಿವರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಆ 31 ರಂದು 49 ಲಕ್ಷ 29 ಸಾವಿರದ 121 ಜನರು ವಿವರ ಸಲ್ಲಿಸಿದ್ದು, ದಾಖಲೆಯಾಗಿದೆ. ಕಳೆದ ವರ್ಷ ಅಂತಿಮ ದಿನದಂದು 34 ಲಕ್ಷದ 95 ಸಾವಿರದ 93 ಜನರು ತೆರಿಗೆ ವಿವರ ಸಲ್ಲಿಸಿದ್ದರು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಆದಾಯ ತೆರಿಗೆ ವಿವರ ಸಲ್ಲಿಕೆ ಶೇ 41 ರಷ್ಟು ಹೆಚ್ಚಾಗಿದ್ದು, ಒಂದೇ ದಿನದಲ್ಲಿ ದಾಖಲೆಯಷ್ಟು ಜನರು ವಿವರ ಸಲ್ಲಿಸಿದ್ದಾರೆ.

      ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ)ಭಾನುವಾರದಂದು ಆದಾಯ ತೆರಿಗೆ ವಿವರ ಅಂಕಿಅಂಶವನ್ನು ಬಿಡುಗಡೆ ಮಾಡಿದೆ. ಕೊನೆಯ ಐದು ದಿನಗಳಲ್ಲಿ 1 ಕೋಟಿ 47 ಲಕ್ಷದ 82 ಸಾವಿರದ 95 ಐಟಿ ರಿಟರ್ನ್ಸ್ ಸಲ್ಲಿಕೆಯಾಗಿದ್ದು, ಇದು ಕಳೆದ ವರ್ಷ 1 ಕೋಟಿಯಷ್ಟಿತ್ತು.

     ಈ ಬಾರಿ 4 ಲಕ್ಷದ 35 ಸಾವಿರದ 96 ಜನರು ಆದಾಯ ತೆರಿಗೆ ವಿವರ ಸಲ್ಲಿಸಿದ್ದು, ಇದು ಶೇ 41 ರಷ್ಟು ಹೆಚ್ಚಾಗಿದೆ. ಸಿಬಿಡಿಟಿ ಪ್ರಕಾರ 2019-20 ರ ಪರಿಶೀಲನಾ ವರ್ಷಕ್ಕೆ 5 ಕೋಟಿ 65 ಲಕ್ಷದ 8 ಸಾವಿರದ 183 ಆದಾಯ ತೆರಿಗೆ ವಿವರಗಳು ಸಲ್ಲಿಕೆಯಾಗಿದ್ದು, 2018-19 ರ ಪರಿಶೀಲನಾ ವರ್ಷದಲ್ಲಿ 5 ಕೋಟಿ 42 ಲಕ್ಷದ 21 ಸಾವಿರದ 378 ನಷ್ಟಿತ್ತು.

      ಮಂಡಳಿಯ ಪ್ರಕಾರ ಆಗಸ್ಟ್ 31 ರಂದು ಅತ್ಯಂತ ಸರ್ವರ್ ದಟ್ಟಣೆಯ ಸಮಯದಲ್ಲಿ ಪ್ರತಿ ಸೆಕೆಂಡಿಗೆ 196 ಆದಾಯ ತೆರಿಗೆ ಅರ್ಜಿ ಸಲ್ಲಿಕೆಯಾಗುತ್ತಿತ್ತು. ಪ್ರತಿ ನಿಮಿಷಕ್ಕೆ 7447 ಐಟಿಆರ್ ಮತ್ತು ಒಂದು ಗಂಟೆಯೊಳಗೆ 3 ಲಕ್ಷದ 85 ಸಾವಿರದ 571 ಐಟಿ ರಿಟರ್ನ್ಸ್ ಗಳನ್ನು ಬಿಡುವಿಲ್ಲದ ಸಮಯದಲ್ಲಿ ತುಂಬಿಸಲಾಯಿತು.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap