ಕಾರ್ಪೊರೇಟ್ ತೆರಿಗೆ ಇಳಿಸಲು ಕೇಂದ್ರಕ್ಕೆ ಶಿಫಾರಸ್ಸು..!!

ನವದೆಹಲಿ:

     ಆರು ದಶಕಗಳಿಂದ ಜಾರಿಯಲ್ಲಿರುವ ತೆರಿಗೆ ಕಾಯ್ದೆಯ ಪ್ರಮುಖ ಅಂಶಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ನೇಮಿಸಿದ್ದ ಸಮಿತಿ ಶ್ರೀ ನಿರ್ಮಲಾ ಸೀತಾರಾಮನ್ ಅವರಿಗೆ ತನ್ನ ವರದಿ ಒಪ್ಪಿಸಿದೆ .

     ಇದರ ಭಾಗವಾಗಿ ಕಾರ್ಪೊರೇಟ್ ತೆರಿಗೆ ದರವನ್ನು ಕಡಿತಗಳಿಸುವುದು ಸೇರಿದಂತೆ ಇನ್ನೂ ಮುಂತಾದ ಸೂಕ್ಷ್ಮ ವಿಚಾರಗಳ ಬಗ್ಗೆ ಸವಿವರವಾದ ವರದಿ ನೀಡುವುದು ಈ ಸಮಿತಿಯ ಕೆಲಸ ಅದರ ಭಾಗವಾಗಿ ಸಧ್ಯ ಕಂಪನಿಗಳು ಪಾವತಿಸುವ ಶೇ 30ರಷ್ಟು ತೆರಿಗೆಯನ್ನು   ಶೇ 25 ಕ್ಕೆ ಇಳಿಸುವುದು ಮತ್ತು ತೆರಿಗೆ ಪಾವತಿಗಳ ಮೇಲಿನ ಹೆಚ್ಚುವರಿ ಶುಲ್ಕವನ್ನು ರದ್ದುಗೊಳಿಸಲು ಸಮಿತಿ ಶಿಫಾರಸು ಮಾಡಿದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

     ಈ ವರ್ಷದ ಬಜೆಟ್ ಮಂಡನೆಯ ವೇಳೆಯಲ್ಲಿ ತೆರಿಗೆ ದರವನ್ನು ಶೇಕಡಾ 30 ರಿಂದ 25 ಕ್ಕೆ ಇಳಿಸಿದ ನಂತರವೂ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಕಾರ್ಪೊರೇಟ್ ತೆರಿಗೆ ವಸೂಲಿ ಮಾಡುವ ದೇಶವಾಗಿದೆ.ಇಳಿಕೆಯಾಗಿರುವ ತೆರಿಗೆಯೂ ವಾರ್ಷಿಕ ರೂ. 400 ಕೋಟಿ ರೂ ವರೆಗಿನ ಆದಾಯವಿರುವ ಕಂಪನಿಗಳಿಗೆ ಮಾತ್ರ ಅನ್ವಯವಾಗುತ್ತದೆ.

     ಕೇಂದ್ರೀಯ ನೇರ ತೆರಿಗೆ ಮಂಡಳಿಯ ಸದಸ್ಯ ಅಖಿಲೇಶ್ ರಂಜನ್ ನೇತೃತ್ವದ ಸಮಿತಿ ಸೋಮವಾರ ತನ್ನ ವರದಿಯನ್ನು ಎಂ.ಎಸ್.ಸೀತಾರಾಮನ್ ಅವರಿಗೆ ಸಲ್ಲಿಸಿದ್ದು.ಸಧ್ಯಈ ವರದಿಯ ವಿಚಾರಗಳನ್ನು ಎಲ್ಲಿಯೂ ಬಹಿರಂಗ ಪಡಿಒಸಲಾಗಿಲ್ಲ ಮತ್ತು ಹಣಕಾಸು ಸಚಿವಾಲಯದ ವಕ್ತಾರರು ಸಹ ವರದಿಯ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

    “ಸರ್ಕಾರವು ಆದಾಯದ ಮೇಲಿನ ಹೆಚ್ಚುವರಿ ಶುಲ್ಕ ರದ್ದು ಮಾಡಬೇಕು ಮತ್ತು ಕಾರ್ಪೊರೇಟ್ ತೆರಿಗೆಯನ್ನು ಶೇಕಡಾ 25 ಕ್ಕೆ ಇಳಿಸಬೇಕು ಎಂದು ಸಮಿತಿ ವರದಿಯಲ್ಲಿ ಹೇಳಿದೆ” ಎಂದು ತಿಳಿದು ಬಂದಿದೆ.

    ದೇಶೀಯ ಕಂಪನಿಗಳ ಮೇಲೆ ಶೇ 30 ರಷ್ಟು ಕಾರ್ಪೊರೇಟ್ ತೆರಿಗೆ ದರ ಮತ್ತು ವಿದೇಶಿ ಸಂಸ್ಥೆಗಳ ಮೇಲೆ ಶೇ 40 ರಷ್ಟು ತೆರಿಗೆ ವಿಧಿಸುತ್ತದೆ, ಜೊತೆಗೆ ಒಟ್ಟು ತೆರಿಗೆ ಪಾವತಿಗಳ ಮೇಲೆ ಶೇ 4 ರಷ್ಟು ಆರೋಗ್ಯ ಮತ್ತು ಶಿಕ್ಷಣದ ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತದೆ.

     ತೆರಿಗೆ ವಿಧಿಸಬಹುದಾದ ಆದಾಯವು 10 ಕೋಟಿಗೂ  ಮೀರಿದರೆ ದೇಶೀಯ ಕಂಪನಿಗಳಿಗೆ ಶೇ 12 ಮತ್ತು ವಿದೇಶಿ ಕಂಪನಿಗಳಿಗೆ ಶೇ 5 ರಷ್ಟು ಹೆಚ್ಚುವರಿ ಶುಲ್ಕ ವಿಧಿಸುತ್ತದೆ. 

     ಹಣಕಾಸು ಸಚಿವಾಲಯವು ತನ್ನ ಶಿಫಾರಸುಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮೊದಲು ವರದಿಯನ್ನು ಅಧ್ಯಯನ ಮಾಡುತ್ತದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. ಸರ್ಕಾರದ 2020-21ರ ಬಜೆಟ್ ಪ್ರಸ್ತಾವನೆಗಳಲ್ಲಿ ಅವುಗಳನ್ನು ಸೇರಿಸಿಕೊಳ್ಳುವ ನಿರೀಕ್ಷೆಯಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap