ಮೇಘಾಲಯ :
ರಂಜಾನ್ ಹಬ್ಬವನ್ನು ಸುಲಲಿತವಾಗಿ ಆಚರಿಸಲು ಅನುವು ಮಾಡಿಕೊಡುವ ಸಲುವಾಗಿ ಮೇಘಾಲಯದಲ್ಲಿ ಲೋಡ್ ಶೆಡ್ಡಿಂಗ್ ಮಾಡದಂತೆ ರಾಷ್ಟ್ರೀಯ ಪೀಪಲ್ಸ್ ಪಾರ್ಟಿ (ಎನ್ ಪಿಪಿ) ಶಾಸಕ ಎಸ್.ಜಿ.ಎಸ್ಮತೂರ್ ಮೊಮಿನಿನ್ ಸರ್ಕಾರವನ್ನು ಮನವಿ ಮಾಡಿದ್ದಾರೆ.
ಮೇ 5ರಿಂದ ಜೂನ್ 5ರವೆರೆಗೆ ನಡೆಯಲಿರುವ ರಂಜಾನ್ ಹಬ್ಬದ ಪ್ರಯುಕ್ತ ಮುಂಜಾನೆ 1ರಿಂದ 4ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 9ರವರೆಗೆ ರಾಜ್ಯಾದ್ಯಂತ ಅನಿಯಮಿತ ವಿದ್ಯುತ್ ಪೂರೈಕೆ ಮಾಡುವಂತೆ ಅವರು ಮನವಿ ಮಾಡಿದ್ದಾರೆ.ಇದಕ್ಕೆ ಭ್ರಷ್ಟಾಚಾರ ವಿರೋಧಿ ಹಾಘೂ ಮಾನವ ಸಂಪನ್ಮೂಲ ಸಂಘಟನೆ ಕೂಡ ಧ್ವನಿಗೂಡಿಸಿದೆ.
ರಂಜಾನ್ ಹಬ್ಬದ ಸಂದರ್ಭದಲ್ಲಿ ಅನೇಕರು ಉಪವಾಸ ಮುರಿಯುವ ಸಂದರ್ಭದಲ್ಲಿ ವಿದ್ಯುತ್ ವ್ಯತ್ಯಯದಿಂದ ತೊಂದರೆ ಅನುಭವಿಸುತ್ತಾರೆ. ಆದ್ದರಿಂದ ನಿರ್ಧಿಷ್ಟ ಅವಧಿಗೆ ಲೋಡ್ ಶೆಡ್ಡಿಂಗ್ ಸ್ಥಗಿತಗೊಳಿಸುವುದು ಅತಿ ಅಗತ್ಯ ಎಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
