ಸುದ್ದಿ ಮುದ್ರಣದ ಮೇಲಿನ ಶೇ.10ರಷ್ಟು ಸೀಮಾ ಸುಂಕ ಹಿಂತೆಗೆತಕ್ಕೆ ಮನವಿ..!!

ನವದೆಹಲಿ

        ಭಾರತೀಯ ಪತ್ರಿಕಾ ಮಂಡಳಿಯ(ಐಎನ್‌ಎಸ್) ಕಾರ್ಯಕಾರಿ ಸಮಿತಿ ಶುಕ್ರವಾರ ತನ್ನ ತುರ್ತು ಸಭೆಯಲ್ಲಿ ಸುದ್ದಿ ಮುದ್ರಣ, ಪತ್ರಿಕೆಗಳ ಮುದ್ರಣಕ್ಕೆ ಬಳಸುವ ಅನ್‌ಕೋಟೆಡ್ ಮತ್ತು ನಿಯತಕಾಲಿಕೆಗಳಿಗೆ ಬಳಸುವ ಹಗುರವಾದ ಕೋಟೆಡ್‌ ಪೇಪರ್ ಮೇಲಿನ ಶೇ.10ರಷ್ಟು ಸೀಮಾಸುಂಕವನ್ನು ಹಿಂಪಡೆಯುವಂತೆ ಸರ್ಕಾರಕ್ಕೆ ಮನವಿ ಮಾಡಿತು.

       ಭಾರತದಲ್ಲಿ ಪ್ರಮಾಣಿತ ಸುದ್ದಿ ಮುದ್ರಣದ ಒಟ್ಟು ಬಳಕೆ 2.5 ದಶಲಕ್ಷ ಟನ್‌ಗಳು ಮತ್ತು ಸ್ಥಳೀಯ ಗಿರಣಿಗಳು ಕೇವಲ ಒಂದು ದಶಲಕ್ಷ ಟನ್ ಸಾಮರ್ಥ್ಯವನ್ನು ಹೊಂದಿವೆ. ಕಳೆದ ವರ್ಷ, ವಿಶ್ವವ್ಯಾಪಿ ನ್ಯೂಸ್‌ ಪ್ರಿಂಟ್‌ನ ತೀವ್ರ ಕೊರತೆ ಇತ್ತು. ಹೀಗಾಗಿ ಭಾರತೀಯ ಉದ್ಯಮವು ಕೇವಲ 12,726 ಟನ್‌ಗಳಷ್ಟು ನ್ಯೂಸ್‌ ಪ್ರಿಂಟ್‌ನ ಅನ್ನು ರಫ್ತು ಮಾಡಿತ್ತು.

       ಕಡಿಮೆ ಜಾಹೀರಾತು ಆದಾಯ, ಹೆಚ್ಚಿನ ವೆಚ್ಚಗಳು ಮತ್ತು ಡಿಜಿಟಲ್ ದಾಳಿಯಂತಹ ಅನೇಕ ಅಂಶಗಳಿಂದಾಗಿ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳ ಪ್ರಕಾಶಕರು ಈಗಾಗಲೇ ತೀವ್ರ ಆರ್ಥಿಕ ಒತ್ತಡಕ್ಕೆ ಸಿಲುಕಿದ್ದಾರೆ. ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು ನಷ್ಟದಲ್ಲಿವೆ ಮತ್ತು ಈ ಹೇರಿಕೆಯಿಂದಾಗಿ ಅನೇಕರು ಪತ್ರಿಕೆ ಪ್ರಕಟಣೆಯನ್ನು ಸ್ಥಗಿತಗೊಳಿಸುವಂತಾಗಿದೆ. ಹೀಗಾಗಿ ಭಾರತೀಯ ಪತ್ರಿಕೆ ಉದ್ಯಮವನ್ನು, ಅದರ ಮೇಲೆ ಹೇರಿರುವ ಈ ಅಸಹನೀಯ ಹೊರೆಯನ್ನು ರದ್ದುಗೊಳಿಸಲು ಸರ್ಕಾರ ತುರ್ತು ಹಸ್ತಕ್ಷೇಪ ಮಾಡಬೇಕೆಂದು ಐಎನ್‌ಎಸ್ ಮನವಿ ಮಾಡಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap