ಭಾರತದ ಮೀಸಲು ಚಿನ್ನ ಹೆಚ್ಚಳ ..!

ನವದೆಹಲಿ     ಪ್ರಸ್ತುತ ದೇಶದ ಆರ್ಥಿಕತೆಯ ನಿಧಾನಗತಿಯ ಬೇಸರದ ಛಾಯೆಯ ನಡುವೆಯೇ ಭಾರತದ ಮೀಸಲು ಚಿನ್ನ ಹೆಚ್ಚಾಗಿದೆ ಎಂಬ ಸಂತಸದ ವಿಚಾರವನ್ನು ವಿಶ್ವ ಚಿನ್ನದ ಮಂಡಳಿ ಬಿಡುಗಡೆ ಮಾಡಿರುವ ಅಂಕಿಅಂಶ ತಿಳಿಸಿದೆ.ವಿಶ್ವ ಚಿನ್ನದ ಮಂಡಳಿ ವರದಿ ಅನ್ವಯ, ಭಾರತದಲ್ಲಿ 618.2 ಮೆಟ್ರಿಕ್ ಟನ್ ಚಿನ್ನದ ಸಂಗ್ರಹವಿದ್ದು ಒಂಭತ್ತನೇ ಸ್ಥಾನದಲ್ಲಿದೆ.

       ಕಳೆದೆರಡು ದಶಕಗಳಲ್ಲಿ ಭಾರತದ ಚಿನ್ನದ ಮೀಸಲು ದ್ವಿಗುಣಗೊಂಡಿದೆ. 2000 ಇಸವಿಯ ಮೊದಲ ತ್ರೈಮಾಸಿಕದಲ್ಲಿ 357.8 ಮೆಟ್ರಿಕ್ ಟನ್ ಇದ್ದ ಚಿನ್ನದ ಮೀಸಲು ಪ್ರಸಕ್ತ 618.2 ಮೆಟ್ರಿಕ್ ಟನ್ ಗೆ ಹೆಚ್ಚಳವಾಗಿದೆ.ಅಮೆರಿಕ 8,134 ಮೆಟ್ರಿಕ್ ಟನ್ ಚಿನ್ನದ ಸಂಗ್ರಹದೊಂದಿಗೆ ಅಗ್ರಸ್ಥಾನದಲ್ಲಿದ್ದು 3,367 ಮೆಟ್ರಿಕ್ ಟನ್ ಮೀಸಲು ಚಿನ್ನ ಹೊಂದಿರುವ ಜರ್ಮನಿ ನಂತರದ ಸ್ಥಾನದಲ್ಲಿದೆ.

       ಇತ್ತೀಚಿನ ವರದಿ ಅನ್ವಯ, ಭಾರತ ನೆದರ್‌ ಲ್ಯಾಂಡ್ ರಾಷ್ಟ್ರಕ್ಕಿಂತ ಹೆಚ್ಚು ಚಿನ್ನದ ಸಂಗ್ರಹ ಹೊಂದುತ್ತಾ ಒಟ್ಟಾರೆ ಮೀಸಲು ಚಿನ್ನದ ಅಗ್ರ ಹತ್ತು ರಾಷ್ಟ್ರಗಳ ಸಾಲಿಗೆ ಸೇರಿದೆ.ಜಾಗತಿಕವಾಗಿ ಚಿನ್ನದ ದರದಲ್ಲಿ ಹೆಚ್ಚಳವಾಗಿದ್ದು ಆರ್ಥಿಕ ಪರಿಸ್ಥಿತಿಯ ಜಾಗತಿಕ ಕಳವಳವನ್ನು ಸೂಚಿಸುತ್ತದೆ ಎಂದು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ.

        ಮ್ಯೂಚುಯಲ್ ಫಂಡ್, ರಿಯಲ್ ಎಸ್ಟೇಟ್, ನಿಶ್ಚಿತ ಠೇವಣಿಗಿಂತ ಚಿನ್ನದ ಹೂಡಿಕೆ ಇದೀಗ ಉತ್ತಮ ಆಯ್ಕೆಯಾಗಿ ಹೊರಹೊಮ್ಮುತ್ತಿದೆ. ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಚಿನ್ನದ ಬೆಲೆ ಇಳಿಮುಖವಾಗುವುದಿಲ್ಲ ಎಂಬುದು ಸಾಮಾನ್ಯ ನಂಬಿಕೆ. ಆದರೆ ಚಿನ್ನದಲ್ಲಿ ಅತಿ ಹೆಚ್ಚಾಗಿ ಹೂಡಿಕೆ ಮಾಡಿದರೆ ಷೇರುಮಾರುಕಟ್ಟೆಯ ಇತರ ಷೇರುಗಳು ಕಡಿಮೆ ಆಕರ್ಷಕವಾಗಿ ನಗದು ಪಲಾಯನ ಸಾಧ್ಯತೆ ಇರುತ್ತದೆ. ಹೀಗಾಗಿ ಆರ್ಥಿಕ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಚಿನ್ನ ಅತಿ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗಿದೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap