ಕ್ರಾಂತಿಕಾರಿ ಕವಿ ವರವರ ರಾವ್ ಆಸ್ಪತ್ರೆಗೆ ದಾಖಲು…!

ಹೈದರಾಬಾದ್:

     ದೇಶದಲ್ಲಿ ತೀವ್ರ ಸಂಚಲನ ಸೃಷ್ಠಿಸಿರುವ ಭೀಮಾ ಕೊರೆಗಾಂವ್ ಪ್ರಕರಣದ ನ್ಯಾಯಾಂಗ ಬಂಧನದಲ್ಲಿದ್ದ ತೆಲುಗಿನ ಕ್ರಾಂತಿಕಾರಿ ಕವಿ ಮತ್ತು ಬರಹಗಾರ ವರವರ ರಾವ್ ಅವರನ್ನು ಅನಾರೋಗ್ಯದ ಹಿನ್ನೆಲೆ ಮುಂಬೈಯ ಜೆಜೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

     ವರವರ ರಾವ್ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದು ಅವರು ಮುಂಬೈಗೆ ಬರಲು ಅಗತ್ಯ ಪಾಸ್ ವ್ಯವಸ್ಥೆ ಮಾಡಲಾಗಿದೆ ಎಂದು ಹೈದರಾಬಾದ್ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ತಿಳಿಸಿದ್ದಾರೆ.

     ಬಲಪಂಥೀಯರು ಮತ್ತು ವರವರ ರಾವ್ ಅವರ ಕುಟುಂಬ ಸದಸ್ಯರು ಹೈದರಾಬಾದ್ ನ ತಮ್ಮ ನಿವಾಸಗಳಲ್ಲಿ ಮತ್ತು ತೆಲಂಗಾಣದ ಇತರ ಭಾಗಗಳಲ್ಲಿ ಪ್ರತಿಭಟನೆ ಮಾಡಿ ರಾವ್ ಮತ್ತು ದೆಹಲಿ ವಿಶ್ವವಿದ್ಯಾಲಯ ಪ್ರೊಫೆಸರ್ ಜಿ ಎನ್ ಸೈಬಾಬ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಪ್ರತಿಭಟನೆ ನಡೆಸಿದ ಹೊತ್ತಿನಲ್ಲಿಯೆ ರಾವ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವರವರ ರಾವ್ ಮತ್ತು ಸೈಬಾಬ ಅವರಿಗೆ ಕೊರೋನಾ ವೈರಸ್ ಸಮಯದಲ್ಲಿ ಜೈಲಿನಲ್ಲಿ ಸೋಂಕು ತಗಲುವ ಸಾಧ್ಯತೆ ಇದೆ ಎಂಬ ಆತಂಕದಿಂದ ಬಿಡುಗಡೆಗೆ ಪ್ರತಿಭಟನೆ ನಡೆಸಿದ್ದರು.

      2018ರ ನವೆಂಬರ್ ನಲ್ಲಿ ಬಂಧಿತರಾಗಿದ್ದ 80 ವರ್ಷದ ವರವರ ರಾವ್ ಅವರನ್ನು ಬಿಡುಗಡೆ ಮಾಡುವಂತೆ ಅವರ ಪತ್ನಿ ಹೇಮಲತಾ ಮತ್ತು ಪುತ್ರಿ ಪಾವನ ತಮ್ಮ ನಿವಾಸದ ಮುಂದೆ ಮೂರು ಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆಸಿದ್ದರು. ಮೂರು ದಿನಗಳ ಹಿಂದೆ ಅವರ ಮೂವರು ಪುತ್ರಿಯರು ಮಹಾರಾಷ್ಟ್ರ ಮುಖ್ಯಮಂತ್ರಿ, ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಮತ್ತು ಗವರ್ನರ್ ಗೆ ಪತ್ರ ಬರೆದು ತಮ್ಮ ತಂದೆಯನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap