ರೂಪಾಯಿ ಮೌಲ್ಯ ಶೇ3.6 ರಷ್ಟು ಕುಸಿತ..!!

ನವದೆಹಲಿ:

    ವಿದೇಶಿ ಹೂಡಿಕೆದಾರರು ರೂಪಾಯಿ ಕುಸಿತದಿಂದ ತೀವ್ರ ಕಂಗಾಲಾಗಿದ್ದು ಬಂಡವಾಳ ಹೂಡಲು ಹಿಂದೇಟು ಹಾಕುವ ಎಲ್ಲಾ ಲಕ್ಷಣಗಳು ಇತ್ತೀಚೆಗೆ ಕಾಣುತ್ತಿವೆ ಮತ್ತು ರೂಪಾಯಿ ಮೌಲ್ಯ ಕುಸಿತದಿಂದಾಗಿ ಮಾರುಕಟ್ಟೆಯ ಗಾತ್ರವೂ ಕುಸಿಯುವ ಆತಂಕ ಎದುರಾಗಿದೆ.  

    ಮುಂಬೈ ಮೂಲದ ಕ್ವಾಂಟ್ ಆರ್ಟ್ ಮಾರ್ಕೆಟ್ ಸೊಲ್ಯೂಷನ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಮೀರ್ ಲೋಧಾ ಅವರು ಹೇಳುವ ಪ್ರಕಾರ, ರೂಪಾಯಿ ಮೂಲ್ಯ ಕುಸಿತದಿಂದ ವಿದೇಶಿ ಹೂಡಿಕೆ ಕುಸಿಯುವ ವಾತಾವರಣ ಎದುರಾಗಿದೆ, ಏಕೆಂದರೆ ಸಾಮಾನ್ಯವಾಗಿ ವಿದೇಶಿ ಬಂಡವಾಳ ಶಾಹಿಗಳು ಅಲ್ಪಾವಧಿಯ ಹೂಡಿಕೆಗಳನ್ನು ಮಾಡುವುದರಿಂದ ಅವರ ಬಂಡವಾಳ ರೂಪಾಯಿಯ ಏರಿಳಿತದಿಂದ ಪ್ರಭಾವಿತವಾಗಿರುತ್ತದೆ ಮತ್ತು ಅವರು ಯಾವುದೇ ನಷ್ಟ ಅನುಭವಿಸಲು ಸಿದ್ದರಿರುವುದಿಲ್ಲ.ಭಾರತೀಯ ಕಾರ್ಪೊರೇಟ್ ಮತ್ತು ಸರ್ಕಾರಿ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವ ಅವರು ರೂಪಾಯಿ ದುರ್ಬಲಗೊಂಡರೆ ಅವರ ಬಂಡವಾಳವನ್ನು ಯಾವುದೇ ಸಂದರ್ಭದಲ್ಲಿಯಾದರೂ ಹಿಂಪಡೆಯುತ್ತಾರೆ ಇದರಿಂದಾಗಿ ದೇಶದಲ್ಲಿನ ಮಾರುಕಟ್ಟೆ ಮತ್ತು ಉದ್ಯೋಗಗಳ ಮೇಲೆ ತೀವ್ರ ತರಹದ ಹೊಡೆತ ಬೀಳುವುದು ಖಚಿತ ಎಂದು ವರದಿ ತಿಳಿಸಿದೆ .

    ರೂಪಾಯಿ ಕುಸಿತಕ್ಕೆ ಕಾಶ್ಮೀರಕ್ಕೆ ಏಳು ದಶಕಗಳ ಸ್ವಾಯತ್ತತೆಯನ್ನು ಹಿಂತೆಗೆದುಕೊಳ್ಳುವುದು ಒಂದು ಕಾರಣ ಎನ್ನಲಾಗುತ್ತಿದೆ ಭಾರತ-ಪಾಕಿಸ್ತಾನದ ನಡುವಿನ ಸಂಬಂಧ ಕಡಿತವು ಹಲವು ಕಾರಣಗಳಲ್ಲಿ ಒಂದು ಇನ್ನೂ ರೂಪಾಯಿ ಎಷ್ಟು ಕುಸಿದಿದೆ ಎಂದರೆ ಶೇಕಡಾ 3.6 ಕ್ಕಿಂತಲೂ ಹೆಚ್ಚು .ಅಮೇರಿಕ-ಚೀನಾ ವ್ಯಾಪಾರ ಸಂಬಂಧಲ್ಲಿನ ಏರಿಳಿತದಿಂದ ರೂಪಾಯಿ ಮೌಲ್ಯ ಐತಿಹಾಸಿಕ ಕುಸಿತ ದಾಖಲಿಸುವ ಸಾಧ್ಯತೆ ಇದೆ.

    “ರೂಪಾಯಿ ಸ್ಥಿರವಾಗಿರುವವರೆಗೂ ಏರುಮುಖವಾಗಿದ್ದ ಷೇರುಪೇಟೆಯಲ್ಲಿ ಈಗ ಅನೇಕರು ತಮ್ಮ ಷೇರುಗಳನ್ನು ಮಾರಾಟ ಮಾಡಲು ಬಯಸುತ್ತಿದ್ದಾರೆ” ಎಂದು ಶ್ರೀ ಲೋಧಾ ತಿಳಿಸಿದ್ದಾರೆ. “ವಿದೇಶಿ ಹೂಡಿಕೆದಾರರು ತಾವು ಹೂಡಿರುವ ಯಾವುದೇ ದೊಡ್ಡ ಪ್ರಮಾಣದ ಬಂಡವಾಳವನ್ನು ಹಿಂಪಡೆದಲ್ಲಿ ರೂಪಾಯಿ ಮೌಲ್ಯವು ಪಾತಾಳಕ್ಕೆ ಇಳಿಯುವುದು ಖಚಿತ ಎಂದಿದ್ದಾರೆ.”

ವಿದೇಶಿ ಬಂಡವಾಳ ಹೂಡಿಕೆದಾರರು ಖರೀದಿಗೆ ಅನ್ವಯವಾಗುವ ಮಿತಿಗಳನ್ನು ಸರ್ಕಾರ ಸರಾಗಗೊಳಿಸಿದಾಗ ಬಾಂಡ್‌ಗಳನ್ನು ಖರೀದಿಸಲು ಉತ್ಸುಕರಾಗಿದ್ದರು, ಏಕೆಂದರೆ ಅನೇಕ ಅಭಿವೃದ್ಧಿ ಹೊಂದಿದ ಮಾರುಕಟ್ಟೆಗಳು ಕಡಿಮೆ ಲಾಭ ಕೊಡುತ್ತಿದ್ದವು ಮತ್ತು ಅನಿಶ್ಚಿತತೆ ಇರುತ್ತಿತು. ಹೂಡಿಕೆದಾರರು ಯಾವ ದೇಶದ ಕರೆನ್ಸಿ ಮೌಲ್ಯ ಕಡಿಮೆ ಇರುತ್ತದೆಯೋ ಅದನ್ನು ತಮ್ಮ ಬಂಡವಾಳ ಹೂಡಿಕೆಯ ಮಾರುಕಟ್ಟೆಯಾಗಿ ಮಾಡಿಕೊಳ್ಳುತ್ತಾರೆ ಆದರೆ ಅದು ನಿರೀಕ್ಷೆಗಿಂತ ಕಡಿಮೆಯಾದರೆ ಹೂಡಿಕೆ ಹಿಂತೆಗೆಯಲೂ ಹಿಂದೆ ಮುಂದೆ ನೋಡುವುದಿಲ್ಲ  ಇಂತಹುದೆ ಪರಿಸ್ಥಿತಿಯಲ್ಲಿ ಇಂದು ಭಾರತೀಯ ಮಾರುಕಟ್ಟೆ ಇರುವುದು. 

   ಕಳೆದ 10 ವರ್ಷಗಳಲ್ಲಿ ದಾಖಲೆ ಪ್ರಮಾಣದಲ್ಲಿ ರೂಪಾಯಿ ಮೌಲ್ಯ ಕುಸಿತ ಕಂಡಿದೆ,ಸದ್ಯ ಭಾರತದಲ್ಲಿ 30.430 ಬಿಲಿಯನ್ ವಿದೇಶಿ ವಿನಿಮಯ ಸಂಗ್ರಹವಿದೆ ಮತ್ತು ಮೂರು ದಶಕಗಳಲ್ಲಿನ ರಾಜಕೀಯ ಅಸ್ಥಿರತೆಯೂ ಸಹ ರೂಪಾಯಿ ಕುಸಿತಕ್ಕೆ ತಮ್ಮ ಕೊಡುಗೆ ನೀಡಿವೆ ಮತ್ತು ಸರ್ಕಾರಗಳು ಈ ಕುಸಿತ ತಡೆಯಲು ಮಾರುಕಟ್ಟೆ  ನೀತಿ ತಯಾರಕರಿಗೆ ಕುಸಿತವನ್ನು ನಿಯಂತ್ರಿಸಲು ಎಲ್ಲಾ ಅಧಿಕಾರವನ್ನು ನೀಡಿದರೂ ಯಾವುದೇ ಪ್ರಯೋಜನಗಳಾಗಿಲ್ಲ.

  ಇನ್ನಾದರೂ ಸರ್ಕಾರ ರೂಪಾಯಿ ಮೌಲ್ಯ ವೃದ್ಧಿಯಾಗುವ ಕಡೆ ಗಮನ ಹರಿಸಬೇಕಾಗಿದೆ ಇಲ್ಲದಿದ್ದರೆ ಭಾರತೀಯ ಮಾರುಕಟ್ಟೆಯ ಪತನ ಶತಸಿದ್ದ ಎಂದು ವರದಿಯಲ್ಲಿ ತಿಳಿಸಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap