ಕೊರೋನಾ ಲಸಿಕೆ ಸಂಸೋಧನೆ : ಜಗತ್ತಿನ ಶುಭ ಸುದ್ಧಿ ನೀಡಿದ ರಷ್ಯಾ..!

ನವದೆಹಲಿ :

    ಇಷ್ಟು ದಿನ ಜಗತ್ತಿನ ಜನ ಕಾತುರದಿಂದ ಕಾಯುತ್ತಿದ್ದ ಕೊರೊನಾ ಲಸಿಕೆ ಆಗಸ್ಟ್ 12ರಂದೇ ಲಭ್ಯವಾಗಲಿದೆ. ಲಸಿಕೆಯನ್ನು ಗಮಲೇಯ ಸಂಶೋಧನಾ ಸಂಸ್ಥೆ ಮತ್ತು ರಷ್ಯಾದ ರಕ್ಷಣಾ ಸಚಿವಾಲಯ ಜಂಟಿಯಾಗಿ ಅಭಿವೃದ್ಧಿಪಡಿಸಿದೆ ಎನ್ನಲಾಗಿದೆ.

     ಈ ನಡುವೆ ಆಗಸ್ಟ್ 12 ರಂದು ರಷ್ಯಾ ದೇಶವು ಕೊರೊನಾವೈರಸ್ ವಿರುದ್ಧ ಮೊದಲ ಲಸಿಕೆ ಬಿಡುಗಡೆ ಮಾಡಲಿದೆ ಎಂದು ರಷ್ಯಾದ ಉಪ ಆರೋಗ್ಯ ಸಚಿವ ಒಲೆಗ್ ಗ್ರಿಡ್ನೆವ್ ಹೇಳಿದ್ದಾರೆ. ಆಗಸ್ಟ್ 12 ರಂದು ಮೊದಲ ಕೊರೊನಾವೈರಸ್ ಲಸಿಕೆ ನೋಂದಾಯಿಸಲಾಗುವುದು ಎಂದು ಉಪ ಆರೋಗ್ಯ ಸಚಿವ ಒಲೆಗ್ ಗ್ರಿಡ್ನೆವ್ ಹೇಳಿದ್ದಾರೆ.ಮೊದಲ ಕ್ಲಿನಿಕಲ್​ ಪ್ರಯೋಗಕ್ಕೆ ಒಳಗಾದ ಯೋಧರು ಜುಲೈ 13ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, ಎರಡನೇ ಹಂತದ ಪ್ರಯೋಗದಲ್ಲಿ ಭಾಗಿಯಾದವರು ಜುಲೈ 20ರಂದು ಡಿಸ್ಚಾರ್ಜ್​ ಆಗಿದ್ದರು ಎಂದು ತಿಳಿಸಿದ್ದಾರೆ.

      ಲಸಿಕೆಯ ಮೊದಲ, ಎರಡನೇ ಹಾಗೂ ಮೂರನೇ ಹಂತದ ಪ್ರಯೋಗಗಳು ನಡೆಯುತ್ತಿದೆ.ಪ್ರಯೋಗಗಳು ಬಹಳ ಮುಖ್ಯ. ಲಸಿಕೆ ಸುರಕ್ಷಿತವಾಗಿರಬೇಕು ಎಂದು ನಾವು ಅರ್ಥಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ವೈದ್ಯಕೀಯ ವೃತ್ತಿಪರರು ಮತ್ತು ಹಿರಿಯ ನಾಗರಿಕರು ಲಸಿಕೆ ಪಡೆಯುವವರಲ್ಲಿ ಮೊದಲಿಗರಾಗಿದ್ದಾರೆ ಅಂತ ಗ್ರಿಡ್ನೆವ್ ಹೇಳಿದ್ದಾರೆ. ಈ ಹಿಂದಿನ ವರದಿಯಲ್ಲಿ, ಗಮಲೇಯ ನ್ಯಾಷನಲ್ ರಿಸರ್ಚ್ ಸೆಂಟರ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದ ಕೊರೊನಾವೈರಸ್ ಲಸಿಕೆಯನ್ನು ಪರೀಕ್ಷಿಸುವ ಸ್ವಯಂಸೇವಕರ ಅಂತಿಮ ಪರಿಶೀಲನೆಯು ಭಾಗವಹಿಸುವ ಎಲ್ಲರಲ್ಲೂ ರೋಗನಿರೋಧಕ ಶಕ್ತಿಯನ್ನು ತೋರಿಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿತ್ತು.

ಜೂನ್ 18ರಿಂದ ಕ್ಲಿನಿಕಲ್ ಟ್ರಯಲ್ ಆರಂಭವಾಗಿತ್ತು

ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ಜೂನ್ 18 ರಂದು ಪ್ರಾರಂಭವಾಗಿದ್ದು, ಈ ಪ್ರಯೋಗದಲ್ಲಿ 38 ಸ್ವಯಂಸೇವಕರು ಇದ್ದರು ಎನ್ನಲಾಗಿದೆ. ಮತ್ತು ಮೊದಲ ಗುಂಪನ್ನು ಜುಲೈ 15 ರಂದು ಮತ್ತು ಎರಡನೇ ಗುಂಪನ್ನು ಜುಲೈ 20 ರಂದು ಬಿಡುಗಡೆ ಮಾಡಲಾಯಿತು ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap