ಸಿಖ್ ನರಮೇಧ : ದೇಶದ ಕ್ಷಮೆಯಾಚಿಸಿದ ಸ್ಯಾಮ್ ಪಿತ್ರೊಡ ..!!

ನವದೆಹಲಿ:
      ಭಾರತದ ಉಕ್ಕಿನ ಮಹಿಳೆ ಇಂದಿರಾಗಾಂಧಿ ಅವರ ಹತ್ಯೆಯಾದ ಬಳಿಕ ನಡೆದ ಸಿಖ್​ ನರೆಮೇಧ ಕುರಿತಾಗಿ ಈ ಹಿಂದೆ ಆಗಿದೆಲ್ಲಾ ಆಗಿಹೋಯಿತು ಎಂದು ಸ್ಯಾಮ್​ಪಿತ್ರೊಡಾ ನೀಡಿರುವ ಹೇಳಿಕೆಗೆ ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ಇಂದು ಪಿತ್ರೊಡ ಕ್ಷಮೆಯಾಚಿಸಿದ್ದಾರೆ.
         ಪಿತ್ರೊಡಾ ಅವರ ಹೇಳಿಕೆ ಅತ್ಯಂತ ಬೇಜವಾಬ್ದಾರಿತನದ್ದಾಗಿದೆ. ಆದ್ದರಿಂದ ಅವರು ಕೂಡಲೆ ದೇಶದ ಜನತೆಯ ಕ್ಷಮೆಯಾಚಿಸುವುದು ಒಳಿತು ಎಂದು ರಾಹುಲ್ ಸೂಚಿಸಿದ್ದರು.ತಮ್ಮ ಅಜ್ಜಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತಮ್ಮ ಬೆಂಗಾವಲು ಪಡೆಯ ಇಬ್ಬರು ಸಿಬ್ಬಂದಿಯ ಗುಂಡಿಗೆ ಬಲಿಯಾದ ಬಳಿಕ 1984ರ ಅಕ್ಟೋಬರ್​ 31ರಂದು ನಡೆದ ಸಿಖ್​ ನರಮೇಧ ಅತ್ಯಂತ ದುಃಖದಾಯಕ ಘಟನೆ ಎಂದು ಬಣ್ಣಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link