ಲಾಹೋರ್:
ಪಾಕಿಸ್ತಾನ ಮತ್ತು ಭಾರತದ ನಡುವೆ ಇದ್ದ ಒಂದೇಒಂದು ಕೊಂಡಿಯಾಗಿದ್ದ ಸಂಜೋತಾ ರೈಲನ್ನು ಕಳೆದ ವಾರವಷ್ಟೆ ಸ್ತಗಿತಗೊಂಡಿತ್ತು , ಆದರೆ ಉಭಯ ದೇಶಗಳ ಗಡಿ ಸದ್ಯದ ಮಟ್ಟಿಗೆ ಶಾಂತವಾಗಿರುವ ಹಿನ್ನೆಲೆಯಲ್ಲಿ ಇಂದು ಲಾಹೋರ್ ನಿಂದ ದೆಹಲಿಗೆ ತೆರಳುವ ಸಂಜೋತಾ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ದಿಂದ ಪಾಕಿಸ್ತಾನ ಪುನಾರಂಭಿಸಿದೆ.
ಸಂಜೋತಾ ಎಕ್ಸ್‌ಪ್ರೆಸ್ ರೈಲು ಪ್ರತಿ ಸೋಮವಾರ ಮತ್ತು ಗುರುವಾರ ಪಾಕಿಸ್ತಾನದಿಂದ ಹೊರಡುತ್ತದೆ. ನಿನ್ನೆ ದೆಹಲಿಯಿಂದ ಲಾಹೋರ್ ಗೆ ಆಗಮಿಸಿದ್ದ ಸಂಜೋತಾ ಎಕ್ಸ್ ಪ್ರೆಸ್ ಇಂದು ಲಾಹೋರ್ ನಿಂದ ದೆಹಲಿ ತೆರಳುತ್ತಿದೆ.
ಸುಮಾರು 150 ಪ್ರಯಾಣಿಕರನ್ನು ಹೊತ್ತ ಸಂಜೋತಾ ಎಕ್ಸ್ ಪ್ರೆಸ್ ಲಾಹೋರ್ ನಿಂದ ಭಾರತಕ್ಕೆ ತೆರಳುತ್ತಿದೆ ಎಂದು ರೇಡಿಯೋ ಪಾಕಿಸ್ತಾನ ವರದಿ ಮಾಡಿದೆ.
ಫೆ. 14ರ ಪುಲ್ವಾಮಾ ದಾಳಿಯ ನಂತರ ಸಂಜೋತಾ ಎಕ್ಸ್ ಪ್ರೆಸ್ ರೈಲಿನ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕುಸಿದಿದ್ದ ಹಿನ್ನಲೆಯಲ್ಲಿ ಭಾರತ ಫೆಬ್ರವರಿ 28ರಂದು ಈ ರೈಲು ಸೇವೆಯನ್ನು ರದ್ದುಪಡಿಸಿತ್ತು.