ಸಂಚಲನ ಸೃಷ್ಠಿಸಿದ ಬಾಂಬೆ ಹೈಕೋರ್ಟ್ ತೀರ್ಪು

ಮುಂಬೈ:
       ಪ್ರಕರಣವೊಂದರಲ್ಲಿ ಬಾಂಬೆ ಹೈಕೋರ್ಟ್‌ 14 ವರ್ಷದ ಬಾಲಕಿ ಮತ್ತು 56 ವರ್ಷದ ವಕೀಲನ ವಿವಾಹವನ್ನು ಮಾನ್ಯ ಮಾಡಿ ದೇಶದಲ್ಲಿ ಸಂಚಲನ ಸೃಷ್ಟಿಸಿದೆ.
      ಬಾಂಬೇ ಹೈಕೋರ್ಟ್ 14 ವರ್ಷದ ಬಾಲಕಿ ಮತ್ತು 56 ವರ್ಷದ ವಕೀಲನ ವಿವಾಹವನ್ನು ಮಾನ್ಯ ಮಾಡಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾಗಿದ್ದಕ್ಕಾಗಿ ತಮ್ಮ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಪ್ರಕರಣದ ವಜಾ ಕೋರಿ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬಾಂಬೇ ಹೈಕೋರ್ಟ್ ಅಪ್ರಾಪ್ತೆಯ ಸಮ್ಮತಿ ಮೇರೆಗೆ ವಿವಾಹವನ್ನು ಮಾನ್ಯ ಮಾಡಿದೆ.
     ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರಂಜಿತ್‌ ಮೋರೆ ಮತ್ತು ಭಾರತಿ ದಂಗ್ರೆ ಒಳಗೊಂಡ ವಿಭಾಗೀಯ ಪೀಠ, ಅಪ್ರಾಪ್ತೆಯನ್ನು ವಿಚಾರಣೆ ನಡೆಸಿದ್ದು, ಈ ವೇಳೆ ಆಪ್ರಾಪ್ತೆ ವಕೀಲನೊಂದಿಗೆ ಸಹಬಾಳ್ವೆ ನಡೆಸಲು ಒಪ್ಪಿರುವುದಾಗಿ ಹೇಳಿದ್ದಾಳೆ. ಇದೇ ಕಾರಣಕ್ಕೆ ಕೋರ್ಟ್ ಈ ವಿವಾಹವನ್ನು ಮಾನ್ಯ ಮಾಡಿದೆ ಎಂದು ತಿಳಿದು ಬಂದಿದೆ.
ಏನಿದು ಪ್ರಕರಣ?
      2014ರಲ್ಲಿ 14 ವರ್ಷ ವಯಸ್ಸಿನ ಸಂಬಂಧಿ ಬಾಲಕಿಯನ್ನು 56 ವರ್ಷದ ವಕೀಲ ಮದುವೆಯಾಗಿದ್ದರು. ಬಳಿಕ ಬಾಲಕಿ, ವಕೀಲನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಅತ್ಯಾಚಾರ ಆರೋಪದಡಿ ಬಂಧಿತನಾಗಿದ್ದ ವಕೀಲ 10 ತಿಂಗಳ ಸೆರೆವಾಸ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
 
       ಬಳಿಕ ಸಂಧಾನ ಮಾತುಕತೆ ನಡೆಸಲಾಗಿ, ಬಾಲಕಿಗೆ 18 ವರ್ಷ ತುಂಬಿ ಆಕೆ ಹಾಗೂ ವಕೀಲನ ನಡುವಿನ ವೈಷಮ್ಯ ಬಗೆಹರಿದು ಕೂಡಿ ಬಾಳುವ ಒಡಂಬಡಿಕೆ ಏರ್ಪಟ್ಟಿತ್ತು. ಈ ಸಂಗತಿಯನ್ನು ಖುದ್ದು ಆ ಮಹಿಳೆ ಕೋರ್ಟ್‌ ಗೆ ಅಫಿಡವಿಟ್‌ ಮೂಲಕ ಸ್ಪಷ್ಟಪಡಿಸಿದ್ದರು. ಇದನ್ನು ಪರಿಗಣಿಸಿದ ಕೋರ್ಟ್‌ ಈ ವಿವಾಹವನ್ನು ಮಾನ್ಯ ಮಾಡಿದೆ. ಅಲ್ಲದೆ ವಕೀಲನ ವಿರುದ್ಧ ಪ್ರಕರಣವನ್ನೂ ವಜಾಗೊಳಿಸಿದೆ.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap