ದೆಹಲಿ:
ವಿವಾದಿತ ರಾಮಜನ್ಮ ಭೂಮಿ ವಿವಾದದ ಪ್ರಕರಣವನ್ನು ವಿಸ್ತ್ರುತ ಪೀಠಕ್ಕೆ ವರ್ಗಾಯಿಸುವಂತೆ ಕೊರಿದ್ದ ಪ್ರತಿವಾದಿಗಳಿಗೆ ಸುಪ್ರಿಮ್ ಕೊರ್ಟ್ ತೀರ್ಪು ಸ್ವಲ್ಪ ಇರುಸು ಮುರುಸು ಉಂಟು ಮಾಡಿದೆ ಎಂದರೆ ತಪ್ಪಿಲ್ಲ ,ಇಂದು ಕೊರ್ಟ್ ತೀರ್ಪಿನಲ್ಲಿ ಮುಸ್ಲಿಮರು ನಮಾಜ್ ಮಾಡಲು ಮಸೀದಿಯೇ ಆಗಬೇಕೆಂದೇನಿಲ್ಲ ಎಂಬ ಅಲಹಾಬಾದ್ ಹೈಕೋರ್ಟ್ 1994ರಲ್ಲಿ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಇಂದು ಈ ಆದೇಶ ಪ್ರಕಟಿಸಿದೆ. ಪ್ರಾರ್ಥನೆಯ ಹಕ್ಕಿಗೆ ಸ್ಥಳದಿಂದ ಧಕ್ಕೆಯಾಗಬಾರದು. ಮಸೀದಿಗೆ ಪ್ರತ್ಯೇಕ ಮಾನದಂಡ ಇಲ್ಲ. ಅಗತ್ಯಬಿದ್ದಾಗ ಮಸೀದಿ, ಮಂದಿರ, ಚರ್ಚ್ ಜಾಗವನ್ನು ಸರಕಾರ ಸ್ವಾಧೀನಪಡಿಸಿಕೊಳ್ಳಬಹುದು. ಜೊತೆಗೆ ಈ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ತನ್ನ ತೀರ್ಪಿನಲ್ಲಿ ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ