ಮುಂಬೈ:
ವಿದೇಶಿ ಹೂಡಿಕೆದಾರರು ಭಾರತೀಯ ಷೇರುಗಳನ್ನು ಬೃಹತ್ ಪ್ರಮಾಣದಲ್ಲಿ ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿಯುವ ಹಂತ ತಲುಪಿದೆ ಇಂತಹ ಸಮಯದಲ್ಲಿ ವಿದೇಶಿ ಬಂಡವಾಳ ಉತ್ತೇಜನಕ್ಕಾಗಿ ಹೂಡಿಕೆ ನಿಯಮಗಳನ್ನು ಸಡಿಲಿಕೆ ಮಾಡಲು ನಿರ್ಧರಿಸಿದೆ ಎಂದು ಸೆಬಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ .
ಪ್ರಸಕ್ತ ಸಾಲಿನಲ್ಲಿ ವಿದೇಶಿ ಹೂಡಿಕೆದಾರರು ಸುಮಾರು 22000 ಕೋಟಿಗಳಷ್ಟು ಷೇರುಗಳನ್ನು ಮಾರಾಟ ಮಾಡಿದ್ದಾರೆ ಮತ್ತು ಈ ಅಸಮತೋಲನವನ್ನು ತಡೆಯಲು ವಿದೇಶಿ ಹೂಡಿಕೆದಾರರ ಅನುಕೂಲಕ್ಕಾಗಿ ಕೆವೈಸಿ ನಿಯಮಗಳ ಸಡಿಲಿಕೆ ಮತ್ತು ಮಾರುಕಟ್ಟೆ ನಿಯಂತ್ರಕ ಚೌಕಟ್ಟನ್ನು ಹೆಚ್ಚು ಹೂಡಿಕೆದಾರ ಸ್ನೇಹಿಯನ್ನಾಗಿ ಮಾಡಲು ಸೆಬಿ ಮುಂದಾಗಿದೆ.
ಸೆಬಿ ಹೊಸ ನಿಯಮದ ಪ್ರಕಾರ ಪ್ರತಿ ಎಫ್‌ಪಿಐ ಕನಿಷ್ಠ 20 ಹೂಡಿಕೆದಾರರನ್ನು ಹೊಂದಿರಬೇಕು ಮತ್ತು ಕೆವೈಸಿ ನಿಯಮಗಳ ಸರಳೀಕರಣ ಮುಂತಾದ ಹೊಸ ಯೋಜನೆಗಳನ್ನು ಸೆಬಿ ಜಾರಿಗೆ ತರಲು ಯೋಚನೆ ನಡೆಸಿದೆ .
“ಕಾರ್ಯಾಚರಣೆ ನಿರ್ಬಂಧಗಳು ಮತ್ತು ಅವಶ್ಯಕತೆಗಳನ್ನು ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಸರಳೀಕರಿಸುವ ದೃಷ್ಠಿಯಿಂದ ಸದ್ಯ ಅಸ್ತಿತ್ವದಲ್ಲಿರುವ ನಿಯಂತ್ರಕ ಚೌಕಟ್ಟನ್ನು ಸರಳೀಕರಿಸುವುದು ಮತ್ತು ತರ್ಕಬದ್ಧಗೊಳಿಸುವುದು ನಮ್ಮ ಮೊದಲ ಆಧ್ಯತೆ ಎಂದು ಸೆಬಿ ತಿಳಿಸಿದೆ.
ಬ್ಯಾಂಕ್ ಫಾರ್ ಇಂಟರ್ನ್ಯಾಷನಲ್ ಸೆಟಲ್ಮೆಂಟ್ (ಬಿಐಎಸ್) ನಲ್ಲಿ ಸದಸ್ಯರಲ್ಲದ ದೇಶಗಳ ಕೇಂದ್ರ ಬ್ಯಾಂಕುಗಳು ಭಾರತದಲ್ಲಿ ಎಫ್‌ಪಿಐಗಳಾಗಿ ಹೂಡಿಕೆ ಮಾಡಲು ಸೆಬಿ ನಿಯಂತ್ರಣ ಮಂಡಳಿ ಅನುಮತಿ ನೀಡಿದೆ. ಬೇರೆ ದೇಶದ ಬ್ಯಾಂಕುಗಳು ಮಾರುಕಟ್ಟೆ ವಿಚಾರದಲ್ಲಿ ತುಲನಾತ್ಮಕವಾಗಿ ದೀರ್ಘಾವಧಿ ಮತ್ತು ಕಡಿಮೆ ಅಪಾಯದ ಹೂಡಿಕೆಗಳ ಮೊರೆ ಹೋಗುತ್ತಾರೆ ಮತ್ತು ಅವರ ಹೂಡಿಕೆಗಳು ನೇರವಾಗಿ ಅಥವಾ ಪರೋಕ್ಷವಾಗಿ ನಿರ್ವಹಿಸಲ್ಪಡುತ್ತವೆ ”. ಜುಲೈ ಮತ್ತು ಆಗಸ್ಟ್‌ನಲ್ಲಿ ಎಫ್ ಪಿ ಐಗಳು ಸುಮಾರು 22,000 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿವೆ ಎಂದು ಸೆಬಿ ನಿರ್ದೇಶಕರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ