ಹೈದರಾಬಾದ್
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಡಿ.20ರಿಂದ ಡಿ.28ರವರೆಗೆ ದಕ್ಷಿಣ ಭಾರತ ಪ್ರವಾಸ ಕೈಗೊಂಡಿರುವ ಹಿನ್ನಲೆಯಲ್ಲಿ ತೆಲಂಗಾಣ ಪೊಲೀಸರು ರಾಜ್ಯಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.
ಈ ಹಿನ್ನಲೆಯಲ್ಲಿ ನಗರ ಪೊಲೀಸರು ಅಲ್ವಾಲ್, ಬೊಲರಮ್, ಹಕಿಂಪೆಟೆ ಪ್ರದೇಶಗಳಲ್ಲಿ ಸಕಲ ಭದ್ರತಾ ವ್ಯವಸ್ಥೆ ಕೈಗೊಂಡಿದೆ. ಹೈದರಾಬಾದ್ ಪೊಲೀಸರಿಗೆ ಈ ಸಂಬಂಧ ಅನೇಕ ಸಲಹೆಗಳನ್ನು ನೀಡಲಾಗಿದೆ ಎಂದು ರಾಷ್ಟ್ರಪತಿ ಭವನ ತಿಳಿಸಿದೆ.
ಹೈದರಾಬಾದ್ ನಲ್ಲಿ ರಾಷ್ಟ್ರಪತಿಗಳು ಇದೇ 22ರಂದು ಇರಲಿದ್ದು ಅಂದು ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಮೊಬೈಲ್ ಆಪ್ ನ್ನು ಬಿಡುಗಡೆಗೊಳಿಸಲಿದ್ದಾರೆ. ಡಿಸೆಂಬರ್ 23ರಂದು ಪುದುಚೆರಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ. ನಂತರ ಕನ್ಯಾಕುಮಾರಿಯಲ್ಲಿ ವಿವೇಕಾನಂದ ಸ್ಮಾರಕ ಮತ್ತು ವಿವೇಕಾನಂದ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ.
ಡಿಸೆಂಬರ್ 27ಕ್ಕೆ ರಾಷ್ಟ್ರಪತಿಗಳು ಹಿರಿಯ ಗಣ್ಯರು, ಸಚಿವರು, ಅಧಿಕಾರಿಗಳು, ಪ್ರಮುಖ ನಾಗರಿಕರು, ಶಿಕ್ಷಣತಜ್ಞರು ಮೊದಲಾದವರಿಗೆ ಸಿಕಂದರಾಬಾದ್ ನ ರಾಷ್ಟ್ರಪತಿ ನಿಲಯದಲ್ಲಿ ಅತಿಥಿ ಸತ್ಕಾರ ಏರ್ಪಡಿಸಿದ್ದಾರೆ ಎಂದು ತೆಲಂಗಾಣ ಪೊಲೀಸ್ ಇಲಾಖೆ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
