ಶ್ರೀನಗರ
ಪಾಕಿಸ್ತಾನದ ವಿರುದ್ದ ಪ್ರತೀಕಾರ ತೀರಿಸಿಕೊಳ್ಳುವ ಹಂಬಲದಲ್ಲಿರುವ ಕೇಂದ್ರ ಸರ್ಕಾರ ಪಾಕಿಸ್ತಾನದ ಸುತ್ತಾ ಹೆಣೆದಿರುವ ಕುಣಿಕೆಯನ್ನು ಬಿಗಿಗೊಳಿಸುತ್ತಿದ್ದೆ.
ಭಾರತದಲ್ಲಿದ್ದುಕೊಂಡು ಭಾರತಕ್ಕೆ ದ್ರೋಹ ಮಾಡುತ್ತಿರುವ ಪ್ರಯತ್ಯೇಕತಾವಾದಿಗಳಿಗೆ ಜೀರ್ಣಿಸಿಕೊಳಲಾಗದಂತಹ ಶಾಕ್ ನೀಡಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಕಾಶ್ಮೀರದ ಐವರು ಪ್ರಮುಖವಾದ ಪ್ರತ್ಯೇಕತಾವಾದಿ ನಾಯಕರಿಗೆ ನೀಡಿದ್ದ ವಿಶೇಷ ಭದ್ರತೆಯನ್ನು ಕೇಂದ್ರದ ಸೂಚನೆ ಮೇರೆಗೆ ರಾಜ್ಯಾಡಳಿತ ಹಿಂದಕ್ಕೆ ಪಡೆದುಕೊಂಡಿದೆ.
ಪ್ರತ್ಯೇಕತಾವಾದಿ ನಾಯಕರಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಮಿರ್ವಾಜ್ ಉಮರ್ ಫಾರೂಕ್, ಅಬ್ಧುಲ್ ಗನಿಭಟ್, ಬಿಲಾಲ್ ಲೋನ್, ಹಶೀಮ್ ಖುರೇಷಿ ಮತ್ತು ಶಬ್ಬೀರ್ ಶಾ ಅವರಿಗೆ ನೀಡಲಾಗಿದ್ದ ವಿಶೇಷ ಸವಲತ್ತು ಮತ್ತು ಭದ್ರತೆಯನ್ನು ಹಿಂಪಡೆಯುವ ಮೂಲಕ ಮೋದಿ ಸರ್ಕಾರ ದೊಡ್ಡ ಪ್ರಮಾಣದ ಆಘಾತ ನೀಡಿ ಬಿಸಿ ಮುಟ್ಟಿಸಿದೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ