ಕಾಮುಕ ಹೆಡ್ ಮಾಸ್ಟರ್ ಬಂಧನ…!!!!

ತೆಲಂಗಾಣ

           ಖಮ್ಮಮ್ ಜಿಲ್ಲೆಯ ಜಿಲ್ಲಾ ಪಂಚಾಯಿತಿ ನಡೆಸುವಂತಹ ಸ್ಕೂಲ್ ನಲ್ಲಿ ಹೆಡ್ ಮಾಸ್ಟರ್ ಮೇಲೆ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಾಗಿದೆ.     

        ಹೆಡ್ ಮಾಸ್ಟರ್ ಆದ ಭಾಸ್ಕರ್ ರೆಡ್ಡಿ ಸುಮಾರು ವರ್ಷಗಳಿಂದ ಶಿಕ್ಷಕ ವೃತಿಯಲ್ಲಿದ್ದು ಆತ ಖಮ್ಮಮ್ ನ ಶಾಲೆಗೆ ಬಂದಾಗಿನಿಂದ ಆತನ ಮೇಲೆ ಬಂದಿರುವ ಎರಡನೆಯ ಲೈಂಗಿಕ ದೌರ್ಜನ್ಯ ಪ್ರಕರಣ ಇದಾಗಿದೆ ಎಂದು ತಿಳಿದು ಬಂದಿದೆ. ಭಾಸ್ಕರ್ ರೆಡ್ಡಿ ಮೇಲೆ ಇಲಾಖಾ ತನಿಖೆ ಮಾಡಿ ಆತನ ಮೇಲೆ ಫೋಸ್ಕೊ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.    

         2015ರಲ್ಲಿ ಭಾಸ್ಕರ್ ರೆಡ್ಡಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಕೇಸ್ ಮೇಲೆ ಬಂಧನಕ್ಕೆ ಒಳಗಾಗಿರುವುದು ಗಮನಾರ್ಹ ಬಿಡುಗಡೆಯಾದ ಬಳಿಕ ಸೇವೆಗೆ ಸೇರಿ ಮತ್ತೆ ಅದೇ ಪ್ರವೃತಿ ಮುಂದುವರೆಸಿದ್ದಾನೆ ಎಂದು ತಿಳಿದು ಬಂದಿದೆ.ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಸಂಘಟನೆಗಳು ಮತ್ತು ಅದೇ ಸ್ಕೂಲಿನ ಕೆಲವು ವಿದ್ಯಾರ್ಥಿಗಳು ಬಂಧಿತ ಭಾಸ್ಕರ್ ರೆಡ್ಡಿಗೆ ಕಠಿಣ ಸಜೆ ನೀಡುವಂತೆ ಒತ್ತಾಯ ಮಾಡಿದ್ದಾರೆ ಎಂದು ತಿಳಿದು ಬಂದಿದೆ. .  

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link