ನವದೆಹಲಿ
ಭಾರತೀಯ ಸೈನಿಕರಿಗೆ ನೀಡಲಾಗಿದ್ದ ಸುಮಾರು 15 ವರ್ಷ ಹಳೆಯ ರೈಫಲ್ ಗಳಿಗೆ ಬದಲಾಗಿ ಅಮೆರಿಕ ನಿರ್ಮಿತ ಅತ್ಯಾಧುನಿಕ ಎಸ್ಐಜಿ-716 ಅಸಾಲ್ಟ್ ರೈಫಲ್ ನೀಡಲಾಗಿದೆ. ಒಟ್ಟು 72,400 ರೈಫಲ್ಸ್ ಗಳಲ್ಲಿ ಈಗಾಗಲೇ 10 ಸಾವಿರ ಎಸ್ಐಜಿ-716 ರೈಫಲ್ಸ್ ಭಾರತೀಯ ಸೇನೆ ಈಗಾಗಲೇ ಸ್ವೀಕರಿಸಿದೆ ಎಂದು ಸೇನೆ ತಿಳಿಸಿದೆ.
ಎಷ್ಟೇ ದೂರದ ಗುರಿಯನ್ನಾದರೂ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿರುವ ಈ ರೈಫಲ್ ಗಳನ್ನು ಪಾಕಿಸ್ತಾನ ಮತ್ತು ಚೀನಾ ಗಡಿಯಲ್ಲಿನ ಮುಂಚುಣಿ ನೆಲೆಗಳಲ್ಲಿರುವ ಸೈನಿಕರಿಗೆ ಮಾತ್ರ ಕೊಡಲು ನಿರ್ಧರಿಸಿದೆ. ಉಳಿದ ಸೈನಿಕರಿಗೆ ರಷ್ಯಾ ಸಹಭಾಗಿತ್ವದಲ್ಲಿ ತಯಾರಿಸಲಾಗುತ್ತಿರುವ ಕಲಾಶ್ನಿಕೋವ್ ರೈಫಲ್ ಗಳನ್ನು ಮುಂದಿನ ಹಂತದಲ್ಲಿ ನೀಡಲಾಗುತ್ತದೆ ಎಂದು ಸೇನೆ ತಿಳಿಸಿದೆ .
ಪ್ರಸ್ತುತ ಬಳಕೆಯಲ್ಲಿರುವ 5.56 ಎಂಎಂ ಇನ್ಸಾಸ್ ರೈಫಲ್ ಗಳನ್ನು ಬದಲಾವಣೆ ಮಾಡಲು ಸೇನೆ 2005 ರಲ್ಲಿ ಬೇಡಿಕೆ ಇಟ್ಟಿತ್ತು. ಒಟ್ಟು 382 ಬೆಟಾಲಿಯನ್ ಗಳಿಗೆ (ಪ್ರತಿಯೊಂದರಲ್ಲಿಯೂ 850 ಸೈನಿಕರು) ಅತ್ಯಾಧುನಿಕ ಗನ್ ಗಳನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ ಭ್ರಷ್ಟಾಚಾರ ಆರೋಪಗಳಿಂದ ರೈಫಲ್ ಖರೀದಿ ಒಪ್ಪಂದ ವಿಳಂಬವಾಗಿತ್ತು ಎಂದು ಸೇನೆ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
