ಮುಂಬಯಿ :
ಆರ್ ಬಿ ಐ ತನ್ನ ದ್ವೈಮಾಸಿಕ ಹಣಕಾಸು ನೀತಿಯ ಪರಾಮರ್ಶೆಯ ನಡೆಸಲು ಇಂದು ಸಭೆ ಕರೆದಿದೆ ಸಭೆಯ ನಿರ್ಧಾರ ಬರುವುದಕ್ಕೂ ಮುನ್ನವೇ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಆರಂಭಿಕ ವಹಿವಟಿನಲ್ಲಿ 200ಕ್ಕೂ ಅಧಿಕ ಅಂಕಗಳ ಜಿಗಿತ ಕಂಡಿದೆ.
ಕಳೆದ ಶುಕ್ರವಾರದ ವಹಿವಾಟನ್ನು ಮುಂಬಯಿ ಶೇರು 118 ಅಂಕಗಳ ನಷ್ಟದೊಂದಿಗೆ ಕೊನೆಗೊಳಿಸಿತ್ತಾದರೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 23 ಅಂಕಗಳ ನಷ್ಟ ಅನುಭವಿಸಿತ್ತು.
ಇಂದು ಮತ್ತೆ ಆರಂಭಗೊಂಡ ಮುಂಬಯಿ ಶೇರು ಪೇಟೆಯಲ್ಲಿ ಸೆನ್ಸೆಕ್ಸ್ ಸೂಚ್ಯಂಕ ಬೆಳಗ್ಗೆ 10.45ರ ಸುಮಾರಿಗೆ 186 ಅಂಕಗಳ ಏರಿಕೆ ದಾಖಲಿಸಿತು ನಿಫ್ಟಿ 52.50 ಅಂಕಗಳ ಏರಿಕೆ ಕಂಡಿದೆ.
ಇಂದಿನ ಟಾಪ್ ಗೇನರ್‌ಗಳ ಪಟ್ಟಿ ಈರೀತಿಯಿದೆ ಹೀರೋ ಮೋಟೋ ಕಾರ್ಪ್, ಏಶ್ಯನ್ ಪೇಂಟ್ಸ್ , ಬಜಾಜ್ ಆಟೋ, ಎಚ್‌ಯುಎಲ್, ಅವಳಿ ಎಚ್ ಡಿ ಎಫ್ ಸಿ, ಪವರ್ ಗ್ರಿಡ್, ಟಿಸಿಎಸ್, ಬಜಾಜ್ ಫಿನಾನ್ಸ್ ಶೇರುಗಳು ಶೇ.3ರ ಏರಿಕೆಯನ್ನು ದಾಖಲಿಸಿದವು.
ಆರ್‌ಬಿಐ ಗುರುವಾರ ತನ್ನ ದ್ವೆ„ಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಲಿದೆ. ಕಳೆದ ಎರಡು ಬಾರಿಯ ಪರಾಮರ್ಶೆಯಲ್ಲಿ ಆರ್‌ಬಿಐ ತಲಾ ಶೇ.0.25ರ ಪ್ರಮಾಣದಲ್ಲಿ ರಿಪೋ ದರ ಕಡಿತ ಮಾಡಿತ್ತು.ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಇದೀಗ ನಿರಂತರ ಮೂರನೇ ಬಾರಿಗೆ ರೇಟ್ ಕಟ್ ಕ್ರಮ ಕೈಗೊಳ್ಳುವರೆಂಬ ನಿರೀಕ್ಷೆಯಲ್ಲಿ ಶೇರು ಪೇಟೆ ಇದೆ.ಇಂದು ಬೆಳಗ್ಗಿನ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಇಂದು 31 ಪೈಸೆಗಳ ಏರಿಕೆಯನ್ನು ದಾಖಲಿಸಿ 69.39 ಡಾಲರ್ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








