ಸಿಂಧುತ್ವ ಪರೀಕ್ಷೆಯಲ್ಲಿ ಗೆದ್ದ ರಾಹುಲ್ ಗಾಂಧಿ…!!!

ಲಕ್ನೋ

     ಅಮೇಥಿಯ ಹಾಲಿ ಸಂಸದ ರಾಹುಲ್ ಗಾಂಧಿ ಅವರು ಸಲ್ಲಿಸಿದ್ದ ನಾಮಪತ್ರದಲ್ಲಿ ಹೆಸರು ಬದಲಾವಣೆ ಕುರಿತಂತೆ ಬಂದಿದ್ದ ಆಕ್ಷೇಪವನ್ನು ಚುನಾವಣಾ ಆಯೋಗ ಇಂದು ಇತ್ಯರ್ಥಗೊಳಿಸಿದೆ. ವಯನಾಡಿಗೂ ಮುನ್ನ ಅಮೇಥಿಯಿಂದ ನಾಮಪತ್ರ ಸಲ್ಲಿಸಿರುವ ರಾಹುಲ್ ಗಾಂಧಿ ಅವರ ಅಫಿಡವಿಟ್ ಗೆ ಆಕ್ಷೇಪ ಎದುರಾಗಿತ್ತು.

    ಅಮೇಥಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸ್ವತಂತ್ರ ಅಭ್ಯರ್ಥಿ ಧ್ರುವ್ ಲಾಲ್ ಆಕ್ಷೇಪ ವ್ಯಕ್ತ ಪಡಿಸಿದ್ದರು. ಈ ಆಕ್ಷೇಪಣೆ ಅರ್ಜಿಗೆ  ಉತ್ತರ ನೀಡುವಂತೆ ಚುನಾವಣೆ ಅಧಿಕಾರಿಗಳು ರಾಹುಲ್ ಗಾಂಧಿಗೆ ಸೂಚಿನೆ ನೀಡಿದ್ದರು.ಇದಕ್ಕೆ ರಾಹುಲ್ ಗಾಂಧಿ ಅವರ ವಕೀಲ ನೀಡಿರುವ ಉತ್ತರ ಸಮರ್ಪಕ ವಾಗಿದೆ ಮತ್ತು ಅಫಿಡವಿಟ್ ನಲ್ಲಿ ಯಾವುದೇ ಲೋಪವಿಲ್ಲ ಎಂದು ಆಯೋಗ ತಿಳಿಸಿದೆ.

    ನಾಮಪತ್ರ ಅಸಿಂಧುಗೊಳಿಸಲು ಸಾಧ್ಯವಿಲ್ಲ ಎಂದು ಅಮೇಥಿಯ ಚುನಾವಣಾಧಿಕಾರಿ ಹೇಳಿದ್ದಾರೆ. ರಾಹುಲ್ ಗಾಂಧಿ ಭಾರತ ನಾಗರಿಕರೋ ಅಲ್ಲವೋ? ಯಾವಾಗಲಾದರೂ ಬ್ರಿಟಿಷ್ ನಾಗರಿಕರಾಗಿದ್ದರಾ? ಅವರು ಸತ್ಯ ಹೇಳಬೇಕಿದೆ. ರಾಹುಲ್ ಗಾಂಧಿ ಅವರು 2004ರಿಂದ ಸಲ್ಲಿಸುತ್ತಾ ಬಂದಿರುವ ಚುನಾವಣೆ ಅಫಿಡವಿಟ್ ನಲ್ಲಿ ರೌಲ್ ವಿನ್ಸಿ ಎಂಬ ಹೆಸರಿನಲ್ಲೇ ಪದವಿ ಪ್ರಮಾಣ ಪತ್ರ ಇದೆ. ರಾಹುಲ್ ಗಾಂಧಿ ಅವರಿಗೆ ಬೇರೆ ದೇಶಗಳಲ್ಲಿ ಬೇರೆ ಹೆಸರುಗಳಿವೆಯಾ ಅಂತ ನಾವು ತಿಳಿದುಕೊಳ್ಳಲು ಬಯಸುತ್ತೇವೆ ಎಂದು ಬಿಜೆಪಿ ವಕ್ತಾರ ಪ್ರಶ್ನಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap