ಮುಂಬೈ: 

ಮೂರು ವಾರದಿಂದದ ಕಡಿಮೆಯಾಗುತ್ತಿರುವ ಪೆಟ್ರೋಲ್ ಮತ್ತು ಡೀಸಲ್ ದರಗಳು ಮತ್ತೆ ಅದೇ ಹಾದಿ ಹಿಡಿದಿವೆ , ಇಂದು ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡಿದೆ.
ಇಂದು ಮುಂಜಾನೆ 12:00 ಗಂಟೆಗೆ ಪೆಟ್ರೋಲ್ 15 ಪೈಸೆಯಷ್ಟು ಇಳಿಕೆಯಾಗಿದ್ದರೆ, ಡೀಸೆಲ್ ದರದಲ್ಲೂ 15 ಪೈಸೆಯಷ್ಟು ಇಳಿಕೆ ಕಂಡು ಬಂದಿದೆ. ರಾಜಧಾನಿ ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 78.06ರೂಗೆ ಇಳಿಕೆಯಾಗಿದ್ದು, ಡೀಸೆಲ್ ದರ 72.74ಕ್ಕೆ ಇಳಿಕೆಯಾಗಿದೆ. ಇನ್ನು ವಾಣಿಜ್ಯ ರಾಜಧಾನಿ ಮುಂಬೈನಲ್ಲೂ ಪೆಟ್ರೋಲ್ ದರದಲ್ಲಿ 15ಪೈಸೆಯಷ್ಟು ಇಳಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರ 83.57 ರೂಗಳಿಗೆ ಇಳಿಕೆಯಾಗಿದ್ದು, ಡೀಸೆಲ್ ದರ ಕೂಡ 16 ಪೈಸೆಯಷ್ಟು ಕಡಿಮೆಯಾಗಿ ಪ್ರತೀ ಲೀಟರ್ ಡೀಸೆಲ್ ದರ 76.22ಕ್ಕೆ ಇಳಿಕೆಯಾಗಿದೆ.ಇನ್ನೂ ನಮ್ಮ ಕಲ್ಪತರು ನಾಡು /ಸ್ಮಾರ್ಟ್ ಸಿಟಿ ತುಮಕೂರಿನಲ್ಲಿ ಇಂದು ಮುಂಜಾನೆ ಪಟ್ರೋಲ್ ಪ್ರತಿ ಲೀಟರ್ ಗೆ 79.26 ರೂ ಮತ್ತು ಡೀಸಲ್ ದರ ರೂ 73.63 ರಷ್ಟಿದೆ ಎಂದು ತಿಳಿಸಲಾಗಿದೆ.
