ನವದೆಹಲಿ:
ಮಗನೊಬ್ಬ ತಾನು ಕೇಳಿದಷ್ಟು ಹಣ ಕೊಡಲಿಲ್ಲವೆಂದು ತನ್ನ ತಂದೆಯನ್ನೇ ಚಾಕುವಿನಿಂದ ಇರಿದು ಸಾಯಿಸಿರುವ ಘಟನೆ ದೆಹಲಿಯ ನೊಯ್ಡಾದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಅಶೋಕ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 17 ವರ್ಷದ ಬಾಲಕ 200 ರೂಪಾಯಿಗಾಗಿ ತಂದೆಯನ್ನೇ ಕೊಲೆ ಮಾಡಿದ ಹೃದಯ ವಿಧ್ರಾವಕ ಘಟನೆ ನಡಡೆದಿದ್ದು .
ಘಟನೆಯ ಹಿನ್ನೆಲೆ:
ಮಗ ಭಾನುವಾರ ರಾತ್ರಿ ತಂದೆಯ ಬಳಿ ಸುಮಾರು 150-200 ರೂ. ಹಣ ಕೊಡುವಂತೆ ಕೇಳಿದ್ದಾನೆ. ಆದರೆ ತಂದೆ ಹಣ ಕೊಡಲು ನಿರಾಕರಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕ್ರೋಧಗೊಂಡ ಹುಡುಗ ಕಯಗೆ ಸಿಕ್ಕ ಚಾಕುವಿನಿಂದ ತಂದೆಯ ಎದೆಗೆ ಚುಚ್ಚಿದ್ದಾನೆ. ತಕ್ಷಣವೇ ತಾಯಿ ಪತಿಯನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲೇ ತಂದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿದಿದ್ದಾರೆ.ಹೆಚ್ಚಿನ ವಿಚಾರಣೆಗಾಗಿ ಬಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
