ಕೋಲ್ಕತ್ತ:
ಪಶ್ಚಿಮ ಬಂಗಾಳದ ಬಿಜೆಪಿ ಸಂಸದೆ ರೂಪಾ ಗಂಗೂಲಿ ಅವರ ಮಗ ಆಕಾಶ್ ಮುಖ್ಯೋಪಾಧ್ಯಯ್ ವೇಗವಾಗಿ ಕಾರನ್ನು ಚಲಾಯಿಸಿ, ಗೋಡೆಗೆ ಗುದ್ದಿರುವ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರು ಚಾಲನೆ ವೇಳೆ ಆಕಾಶ್ ಕುಡಿದಿದ್ದರು ಮತ್ತು ಚಾಲನೆ ವೇಳೆ ನಿಯಂತ್ರಣ ಕಳೆದುಕೊಂಡು ಆಕಾಶ್ ರಾಯಲ್ ಕಲ್ಚರ್ ಗಾಲ್ಫ್ ಕ್ಲಬ್ ಗೋಡೆಗೆ ಕಾರಿನಿಂದ ಗುದ್ದಿದ್ದಾರೆ. ಕಾರು ಮತ್ತು ಗೋಡೆ ಸಂಪೂರ್ಣ ಜಖಂಗೊಂಡಿವೆ ಎಂದು ಕೊಲ್ಕತ್ತಾ ಪೊಲೀಸರು ತಿಳಿಸಿದ್ದಾರೆ . ಬೇಜವಾಬ್ದಾರಿಯುತ ಚಾಲನೆ ಆರೋಪದ ಮೇಲೆ ಆಕಾಶ್ನನ್ನು ಬಂಧಿಸಲಾಗಿದೆ.
ಮಗನ ಬಂಧನದ ಬಳಿಕ ಸರಣಿ ಟ್ವೀಟ್ ಮಾಡಿರುವ ರೂಪಾ ಗಂಗೂಲಿ, ನನ್ನ ಮನೆಯ ಸಮೀಪದಲ್ಲೇ ಮಗನಿಗೆ ಅಪಘಾತವಾಗಿದೆ. ಆಗ ನಾನೇ ಪೊಲೀಸರಿಗೆ ಕರೆ ಮಾಡಿ, ಕಾನೂನುರೀತ್ಯ ಕ್ರಮ ತೆಗೆದುಕೊಳ್ಳುವಂತೆ ಹೇಳಿದ್ದೆನೆ. ಇದರಲ್ಲಿ ಯಾರು ಅವನ ಪರವಹಿಸುವುದಾಗಲಿ ಅಥವಾ ರಾಜಕೀಯ ಮಾಡುವುದಾಗಲಿ ಬೇಡ ಎಂದಿದ್ದಾರೆ. ನಾನು ನನ್ನ ಮಗನನ್ನು ಪ್ರೀತಿಸುತ್ತೇನೆ. ಆದರೆ, ಯಾರೇ ತಪ್ಪು ಮಾಡಿದರೂ ಅದು ತಪ್ಪೇ, ಅದಕ್ಕೆ ಕಾನೂನು ಪ್ರಕಾರ ಕ್ರಮವಾಗಲೇಬೇಕು. ನಾನಾದರೂ ಅಷ್ಟೇ, ಬೇರೆಯವರಾದರೂ ಅಷ್ಟೇ ಎಂದು ಟ್ವೀಟ್ ಮಾಡಿ, ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿದ್ದಾರೆ.
. ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ