ಗಾನ ಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣ್ಯಂ ಇನ್ನಿಲ್ಲ..!

ಚೆನ್ನೈ:

     ಗಾನ ಗಾರುಡಿಗ, ಸ್ವರ ಸಾಮ್ರಾಟ ಎಸ್.ಪಿ. ಬಾಲಸುಬ್ರಹ್ಮಣ್ಯಂ  ಅವರು ಇಂದು ಮಧ್ಯಾನ 1.04 ಕ್ಕೆ ಕೊನೆಯುಸಿರೆಳೆದಿದ್ದಾರೆ.

     ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆ.5ರಂದು ವೈದ್ಯರ ಸಲಹೆ ಮೇರೆಗೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಶ್ವಾಸಕೋಶದ ತೊಂದರೆ ಹಾಗೂ ವಿವಿಧ ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಎಸ್.ಪಿ.ಬಿ. ಅವರ ಆರೋಗ್ಯ ಇತ್ತೀಚೆಗಷ್ಟು ಸುಧಾರಿಸಿದೆ. ಶೀಘ್ರದಲ್ಲೇ ಅವರು ಗುಣಮುಖರಾಗಿ ಮನೆಗೆ ತೆರಳಲಿದ್ದಾರೆ ಎಂದು ಹೇಳಲಾಗಿತ್ತು.

    ಖ್ಯಾತ ಗಾಯಕ ಎಸ್‌.ಪಿ ಬಾಲಸುಬ್ರಮಣ್ಯಂ ಅವರ ಅರೋಗ್ಯ ತೀವ್ರ ಹದಗೆಡುತ್ತಿದ್ದು, ಲೈಫ್‌ ಸಪೋರ್ಟರ್‌ನಿಂದ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಎಂ ಜಿ ಎಂ ಆಸ್ಪತ್ರೆ ನಿನ್ನೆ ರಾತ್ರಿ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ಎಸ್ ಪಿ ಬಿ ಆರೋಗ್ಯ ಚಿಂತಜನಕವಾಗಿದೆ ಎಂದು ತಿಳಿಸಿತ್ತು.

     ತಜ್ಞ ವೈದ್ಯರ ತಂಡ ತೀವ್ರ ನಿಗಾ ವಹಿಸಿದರೂ ಸಹ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಎಂಜಿಎಂ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

      ಗಾನ ಕೋಗಿಲೆ , ಗಾನ ಮಾಂತ್ರಿಕ ಎಂದೆಲ್ಲಾ ಕರೆಸಿಕೊಂಡು ಇಷ್ಟು ದಿನ ಸಹೃದಯರ ಮನ ಗೆದ್ದಿದ್ದ ಶ್ರೀಪತಿ ಪಂಡಿತಾರಾಧ್ಯುಲ ಬಾಲ ಸುಬ್ರಹ್ಮಣ್ಯಂ ತಮ್ಮ ಇಹ ಲೋಕದ ಯಾತ್ರೆಯನ್ನು ಮುಗಿಸಿ ಪರಮಾತ್ಮನಲ್ಲಿ ಲೀನವಾಗಿದ್ದಾರೆ. ಅವರು ಪತ್ನಿ ,ಇಬ್ಬರು ಮಕ್ಕಳು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ