ಅಯೋಧ್ಯೆ ವಿವಾದ : ತ್ವರಿತ ವಿಚಾರಣೆಗೆ ಸುಪ್ರೀಂ ಒಪ್ಪಿಗೆ..!!!

ಹೊಸದಿಲ್ಲಿ :

      ಅಯೋದ್ಯೆ ಭೂ ವಿವಾದ ಪ್ರಕರಣವನ್ನು ತ್ವರಿತವಾಗಿ ವಿಚಾರಣೆ ನಡೆಸಿ ಎಂದು ಪ್ರಕರಣದ ಮೂಲ ಕಕ್ಷಿದಾರರಲ್ಲಿ ಒಬ್ಬರಾದ ಗೋಪಾಲ ಸಿಂಗ್‌ ವಿಶಾರದ ಅವರು ಮಂಗಳವಾರ ಸುಪ್ರೀಂ ಕೋರ್ಟ್‌ ಮೆಟ್ಟಲೇರಿದ್ದಾರೆ.

      ರಾಮಜನ್ಮ ಭೂಮಿ ಭೂ ವಿವಾದವನ್ನು ಸೌಹಾರ್ದಯುತವಾಗಿ ಉದ್ದೇಶದಿಂದ  ಸುಪ್ರೀಂ ಕೋರ್ಟಿನ ಮಾಜಿ ನ್ಯಾ.ಎಫ್ ಎಂ ಐ ಕಲೀಫ‌ುಲ್ಲಾ ನೇತೃತ್ವದ ತ್ರಿಸದಸ್ಯ ಸಂಧಾನಕಾರರ ಸಮಿತಿಯು ಪ್ರಕರಣದಲ್ಲಿ ಯಾವುದೇ ಬೆಳವಣಿಗೆ ಆಗಿಲ್ಲದಿರುವು ದರಿಂದ ಈ ವಿಷಯದ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಕೈಗೊಳ್ಳಬೇಕು ಎಂದು ಕಕ್ಷಿದಾರ ವಿಶಾರದ ಅವರು ತಮ್ಮ ಮೇಲ್ಮನವಿಯಲ್ಲಿ ಆಗ್ರಹಿಸಿದ್ದಾರೆ.

      ಕಕ್ಷಿದಾರ ಗೋಪಾಲ ಸಿಂಗ್‌ ವಿಶಾರದ ಅವರ ಮನವಿಯನ್ನು ಪುರಸ್ಕರಿಸಿದ ವರಿಷ್ಠ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪೀಠವು, ಕೇಸಿನ ತುರ್ತು ವಿಚಾರಣೆಗಾಗಿ ಅದನ್ನು ಪಟ್ಟಿಗೆ ಸೇರಿಸಲು ಆದೇಶಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap