ಮುಂಬೈ :
ರಾಜಾಸ್ಥಾನದಿಂದ ಬಂದ ಸ್ಪೈಸ್ ಜೆಟ್ ವಿಮಾನವೊಂದು ಮುಂಬೈನ ಛತ್ರಿಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ರಾತ್ರಿ ಇಳಿಯುವಾಗ ರನ್ ವೇನಿಂದ ಪಕ್ಕಕ್ಕೆ ಸರಿದು ನಿಂತ ಘಟನೆ ನಡೆದಿದ್ದು.
ಎಸ್‌ಜಿ 6237 ಸ್ಪೈಸ್ ಜೆಟ್ ಬೋಯಿಂಗ್ ವಿಮಾನವು ಸೋಮವಾರ ತಡ ರಾತ್ರಿ 11.51ರ ಸುಮಾರಿಗೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ರನ್ ವೇನಿಂದ ಪಕ್ಕಕ್ಕೆ ಸರಿದು ಮುನ್ನುಗ್ಗಿದಾಗ ಪ್ರಯಾಣಿಕರು ತೀವ್ರವಾಗಿ ಭಯಭೀತರಾಗಿದ್ದರು. ರನ್ ವೇ ದಾಟಿದ ಮೇಲೆಯೂ ವಿಮಾನ ಸುರಕ್ಷಿತವಾಗಿ ನಿಂತಾಗ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಮತ್ತು ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸುವಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಸಫಲರಾಗಿದ್ದಾರೆ ಎಂದು ತಿಳಿದು ಬಂದಿದೆ.ಈ ವಿಷಯವಾಗಿ ಉನನ್ನತ ಮಟ್ಟದ ತನಿಖೆ ಆದೇಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
