ನವದೆಹಲಿ:
ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದ್ದು , ಒಂದು ಸಿಲಿಂಡರ್ ಬೆಲೆಯಲ್ಲಿ 162.50 ಕಡಿತ ಮಾಡಲಾಗಿದೆ.ಇನ್ನೂ ರಾಜಧಾನಿ ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಇಂದಿನಿಂದ ಜಾರಿಗೆ ಬರುವಂತೆ 744 ರಿಂದ 581.50 ಕ್ಕೆ ಇಳಿಸಲಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು ದೇಶದ ಇತರ ಭಾಗಗಳಲ್ಲಿ ಇದೇ ರೀತಿಯ ದರ ಕಡಿತವನ್ನು ಜಾರಿಗೊಳಿಸಿವೆ.
ಮುಂಬೈಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗೆ 579 ಇರಲಿದ್ದು ಕೋಲ್ಕತ್ತಾದಲ್ಲಿ ಅಡುಗೆ ಅನಿಲ ಇಂಧನ ದರವ 584.50 ಕ್ಕೆ ಇಳಿದಿದೆ. ಚೆನ್ನೈನಲ್ಲಿ ಎಲ್‌ಪಿಜಿ ಸಿಲಿಂಡರ್‌ದರ ರೂ .569.50 ತಲುಪಿದೆ. ಬೆಂಗಳೂರಿನಲ್ಲಿ ರೂ. 585 ಗೆ ನಿಗದಿಯಾಗಿದೆ.
ಜಾಗತಿಕ ಇಂಧನ ಮಾರುಕಟ್ಟೆ ಕುಸಿತದ ನಡುವೆ ಕಳೆದ ಎರಡು ತಿಂಗಳುಗಳಲ್ಲಿ ಬೆಲೆಗಳನ್ನು ಕಡಿತಗೊಳಿಸ ಲಾಗುತ್ತಿದ್ದು ತಿಂಗಳ ಮೊದಲ ದಿನ ಬೆಲೆ ಪರಿಷ್ಕರಣೆ ನಡೆಯುತ್ತಿದೆ. ಕೊರೋನಾ ಸಂಬಂಧಿತ ಲಾಕ್‌ಡೌನ್ ಮಾರ್ಚ್ 25 ರಿಂದ ಪ್ರಾರಂಭವಾದಾಗಿನಿಂದ, ಎಲ್‌ಪಿಜಿ ಸಿಲಿಂಡರ್‌ಗಳ ಖರೀದಿ ಹೆಚ್ಚಾಗಿದೆ. ಸ್ಥಳೀಯ ಬೇಡಿಕೆಯನ್ನು ಪೂರೈಸಲು ಸಾಕಷ್ಟು ದಾಸ್ತಾನು ಇರುವುದರಿಂದ ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಲ್ಲ ಎಂದು ಚಿಲ್ಲರೆ ವ್ಯಾಪಾರಿಗಳು ಒತ್ತಿಹೇಳಿದ್ದಾರೆ.
ಭಾರತದ ಅತಿದೊಡ್ಡ ಇಂಧನ ಚಿಲ್ಲರೆ ವ್ಯಾಪಾರಿ ಇಂಡಿಯನ್ ಆಯಿಲ್ ಕಾರ್ಪ್ ಲಿಮಿಟೆಡ್ (ಐಒಸಿ) ಏಪ್ರಿಲ್ ನಲ್ಲಿ ಸಿಲಿಂಡರ್ ಮಾರಾಟದಲ್ಲಿ 20% ಹೆಚ್ಚಳವಾಗಿದೆ ಎಂದು ವರದಿ ಮಾಡಿದೆ.